ಇತ್ತೀಚಿನ ಸುದ್ದಿ
ಆರ್. ಆರ್. ನಗರ ಚುನಾವಣೆ: ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಮುನಿರತ್ನ
October 7, 2020, 9:09 AM

ಬೆಂಗಳೂರು(reporterkarnataka news): ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಮುನಿರತ್ನ ಇಂದು ಮುಂಜಾನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಇದುವರೆಗೆ ಆರ್ ಆರ್ ನಗರ ಅಭ್ಯರ್ಥಿ ಪ್ರಕಟಿಸಿಲ್ಲ.ರಾಜ್ಯ ಬಿಜೆಪಿ ಕೋರ್ ಕಮಿಟಿ ಇಬ್ಬರ ಹೆಸರನ್ನು ಶಿಫಾರಸು ಮಾಡಿ ಬಿಜೆಪಿ ವರಿಷ್ಟರಿಗೆ ಕಳುಹಿಸಿಕೊಟ್ಟಿದೆ. ಇದರ ಜೊತೆಗೆ ಚುನಾವಣಾ ಅಕ್ರಮ ಪ್ರಶ್ನಿಸಿ ಮುನಿರತ್ನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.