ಇತ್ತೀಚಿನ ಸುದ್ದಿ
ಮುಂಬೈಯಲ್ಲಿ ಸಿಲಿಂಡರ್ ಸ್ಫೋಟ: 20ಕ್ಕೂ ಹೆಚ್ಚು ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
December 6, 2020, 1:25 PM

ಮುಂಬೈ(reporterkarnataka news): ನಗರದ ಲಾಲ್ ಭಾಗ್ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿವೆ. ಗಾಯಗೊಂಡಿರುವ 12 ಮಂದಿಯನ್ನು ಕೆ ಎಂ ಇ ಆಸ್ಪತ್ರೆಗೆ ಸೇರಿಸಲಾಗಿದೆ. 4 ಮಂದಿ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾಲ್ ಭಾಗ್ ನ ಗಣೇಶ ಗಲ್ಲಿಯ ಸಾರಾ ಭಾಯಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ.