ಇತ್ತೀಚಿನ ಸುದ್ದಿ
ಮುಂಬೈ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: ಒಂದು ಸಾವು, 40 ರೋಗಿಗಳ ಸ್ಥಳಾಂತರ
October 13, 2020, 8:30 AM

ಮುಂಬೈ(reporterkarnataka news):
ಮುಂಬೈ ಮಹಾನಗರದ ಮುಲುಂದ್ ನಲ್ಲಿರುವ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಒಬ್ಬ ವ್ಯಕ್ತಿ ಮೃತ ಪಟ್ಟ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಬೆಳಿಗ್ಗೆ ಸುಮಾರು 6.15ರ ವೇಳೆಗೆ ಅಪೆಕ್ಸ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯಲ್ಲಿದ್ದ 40 ರೋಗಿಗಳನ್ನು ಇತರ ಆಸ್ಪತ್ರೆಗೆ ರವಾನಿಸಲಾಯಿತು. ಐದು ಆಸ್ಪತ್ರೆಗಳಿಗೆ ಈ ರೋಗಿಗಳನ್ನು ಶಿಫ್ಟ್ ಮಾಡಲಾಯಿತು.
ಆದರೆ ಸುಟ್ಟ ಗಾಯಗಳೊಂದಿಗೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಬೆಂಕಿಯನ್ನು ಇದೀಗ ನಿಯಂತ್ರಣಕ್ಕೆ ತರಲಾಗಿದೆ.