ಇತ್ತೀಚಿನ ಸುದ್ದಿ
ವಿದ್ಯುತ್ ಗ್ರಿಡ್ ನಲ್ಲಿ ತಾಂತ್ರಿಕ ತೊಂದರೆ: ಮುಂಬೈ ನಲ್ಲಿ ರೈಲು ಸಂಚಾರ ಬಂದ್
October 12, 2020, 3:01 PM

ಮುಂಬೈ(reporterkarnataka news): ವಿದ್ಯುತ್ ಗ್ರಿಡ್ ನಲ್ಲಿ ಭಾರೀ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಮುಂಬೈ ಮಹಾನಗರದಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮುಂಬೈ ಸೇರಿದಂತೆ ಪಶ್ಚಿಮ ವಲಯದಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇಡೀ ಮುಂಬೈ ಮಹಾನಗರದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಮುಂಬೈ ನಗರದಲ್ಲಿ ಲೋಕಲ್ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ರೈಲು ಆರಂಭವನ್ನು ಎದುರು ನೋಡುತ್ತಿದ್ದಾರೆ.