ಇತ್ತೀಚಿನ ಸುದ್ದಿ
ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಯುವತಿ ನಾಪತ್ತೆ
January 3, 2021, 9:14 AM

ಮಂಗಳೂರು (reporterkarnataka news): ಮುಲ್ಕಿ ತಾಲೂಕಿನ ನಿವಾಸಿ ಚೈತ್ರ (21 ವರ್ಷ) ಎಂಬ ಯುವತಿ ಮನೆಯ ಗೇಟಿನ ಬಳಿಯಿಂದ ಜನವರಿ 1ರಿಂದ ಕಾಣೆಯಾಗಿದ್ದಾರೆ.
ಕಾಣೆಯಾದ ಮಹಿಳೆಯು 5.3 ಅಡಿ ಎತ್ತರ, ಮೈಬಣ್ಣ-ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕಾಣೆಯಾದ ದಿನ ನೀಲಿ ಬಣ್ಣದ ಪ್ಯಾಂಟ್ ಹಾಗೂ ಬೂದು ಬಣ್ಣ ಟಾಪ್ ಧರಿಸಿರುತ್ತಾರೆ. ಇವರು ಕನ್ನಡ, ಇಂಗ್ಲೀಷ್ ಮತ್ತು ತುಳು ಮಾತನಾಡುತ್ತಾರೆ.
ಈ ಚಹರೆಯ ಯುವತಿ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆಗೆ 0824-2290533, 9480805332, 9480805359 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.