ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಿಡುಗಡೆ: ಅಜೀರ್ಣ ಮಾತ್ರೆ ಜತೆ ನಿದ್ದೆಗುಳಿಗೆ ಸೇವಿಸಿದ್ದರಂತೆ !
November 30, 2020, 12:55 PM

ಬೆಂಗಳೂರು(reporterkarnataka news): ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಇದೀಗ ಬಿಡುಗಡೆಯಾಗಿದ್ದಾರೆ. ತಮ್ಮ ಆತ್ಮಹತ್ಯೆ ಯತ್ನದ ಕುರಿತು ಕೂಡ ಅವರು ಸ್ಪಷ್ಟನೆ ನೀಡಿದ್ದಾರೆ.
ಇದೊಂದು ಆಕಸ್ಮಿಕ ಘಟನೆ, ಸಂಬಂಧಿಯೊಬ್ಬರ ಮದುವೆಯಲ್ಲಿ ಊಟ ಮಾಡಿದ್ದೆ. ಅರ್ಜೀಣವಾಗಿತ್ತು. ಆ ಸಂಬಂಧ ಮಾತ್ರೆ ತೆಗೆದಿದ್ದೆ. ಜತೆಗೆ ನಿದ್ದೆ ಮಾತ್ರೆ ಸೇವಿಸಿದ ಪರಿಣಾಮ ಡೋಸೆಜ್ ಹೆಚ್ಚಾಗಿ ಈ ಅನಾಹುತ ಸಂಭವಿಸಿದೆ . ಇದರ ಹೊರತಾಗಿ ಬೇರೆ ಕಾರಣಗಳಿಲ್ಲ ಎಂದು ಸಂತೋಷ್ ಹೇಳಿದ್ದಾರೆ.