ಇತ್ತೀಚಿನ ಸುದ್ದಿ
ಮುಖದ ಸೌಂದರ್ಯ: ಕಿತ್ತಳೆ ರಸ, ಜೇನು ತುಪ್ಪದ ಉಪಯೋಗ ನಿಮಗೆ ಗೊತ್ತೇ?
September 28, 2020, 7:39 AM

ಕಿತ್ತಳೆ ರಸ ಮತ್ತು ಜೇನು ತುಪ್ಪ ಸೇವನೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿ ಬಳಸುವುದು ಎಷ್ಟು ಜನರಿಗೆ ಗೊತ್ತಿದೆ?
ಮುಖದ ಕಾಂತಿ ಹೆಚ್ಚಿಸಲು ಇವೆರಡರ ಮಿಶ್ರಣ ತುಂಬಾ ಪರಿಣಾಮಕಾರಿ ಎನ್ನುವುದು ಬಲ್ಲವರಿಗೆ ಮಾತ್ರ ಗೊತ್ತು.
ಕಿತ್ತಳೆ ರಸ ಮತ್ತು ಜೇನು ತುಪ್ಪವನ್ನು ಸರಿಯಾಗಿ ಬೆರೆಸಿ ಚೆನ್ನಾಗಿ ಕಲೆಸಿ ಇಟ್ಟುಕೊಳ್ಳಬೇಕು. ತಣ್ಣೀರಿನಿಂದ ಚೆನ್ನಾಗಿ ತೊಳೆದ ಮುಖಕ್ಕೆ ಈ ತೆಳು ಪ್ಯಾಕ್ ಹಾಕಿಕೊಳ್ಳಬೇಕು. 15 ನಿಮಿಷಗಳ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆದು ಕೊಂಡರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ಲಕಲಕ ಅಂತ ಹೊಳೆಯುತ್ತಿರುತ್ತದೆ.
ಮಾನಸ ಚೈತ್ರಾ ದಾವಣಗೆರೆ