ಇತ್ತೀಚಿನ ಸುದ್ದಿ
ಸಾಲ ಮೊರೋಟೋರಿಯಂ ಅವಧಿ ವಿಸ್ತರಣೆ: ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
December 9, 2020, 12:41 PM

ನವದೆಹಲಿ(reporterkarnataka news): ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಸಾಲ ಮೊರೋಟೋರಿಯಂ ಅವಧಿ ವಿಸ್ತರಿಸಬೇಕು ಎಂಬ ಮನವಿ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕತೆ ಚೇತರಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಮೊರೋಟೋರಿಯಂ ಅವಧಿ ವಿಸ್ತರಿಸ ಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.