ಇತ್ತೀಚಿನ ಸುದ್ದಿ
ಮೊರೊಟೋರಿಯಂ ಅವಧಿಯ ಚಕ್ರಬಡ್ಡಿ ರದ್ದಾಗುವುದೇ? ಕೇಂದ್ರ ಸರಕಾರದ ನಿಲುವು ಏನು?
October 3, 2020, 2:49 PM

ನವದೆಹಲಿ(reporterkarnataka news,): ಸಾಲ ವಸೂಲಾತಿ ನಿರ್ಬಂಧ ಅವಧಿಯಲ್ಲಿನ ಸಾಲದ ಮೇಲಿನ ಚಕ್ರಬಡ್ಡಿ ವಸೂಲಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಕುರಿತು ಹಣಕಾಸು ಇಲಾಖೆ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ವರದಿಯಾಗಿದೆ. ಆದರೆ ಅಧಿಕೃತವಾಗಿ ಹಣಕಾಸು ಇಲಾಖೆ ಪ್ರತಿಕ್ರಿಯೆ ನೀಡಿಲ್ಲ.
ಮೊರೋಟೋರಿಯಂ ಅವಧಿಯಲ್ಲಿನ ಸಾಲದ ಮೇಲೆ ಚಕ್ರಬಡ್ಡಿ ವಸೂಲಿ ಮಾಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅಕ್ಟೋಬರ್ 5ರಂದು ವಿಚಾರಣೆ ನಡೆಯಲಿದೆ