7:25 PM Wednesday25 - November 2020
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಭೃಂಗೀಶ್ ನೇಮಕ ಡಿಸೆಂಬರ್ 5 ರಾಜ್ಯ ಬಂದ್:  ಕನ್ನಡ ಪರ ಸಂಘಟನೆಗಳ ಸಭೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶ್ರೀರಾಮುಲು ಭೇಟಿ ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ

ಕವಿತೆ : ಮೋಹ

August 11, 2020, 2:51 AM

ರಚನೆ : ಭಗತ್ ಗಣೇಶ್ ಮುಂಡಾನ್‌ತ್ತಡ್ಕ

ಬಳ್ಳಿ ಚಿಗುರಿ ಹೂ ಬಿಟ್ಟು ನಕ್ಕಾಯ್ತು
ತಂಗಾಳಿ ಮಲ್ಲಿಗೆಯ ಕಂಪನ್ನು ಹೊತ್ತು
ಊರಿಡೀ ಮೆರೆದಾಯ್ತು
ಇಬ್ಬನಿ ಮುತ್ತಾಗಿ ಸಿಂಗಾರವಾಯ್ತು
ಕೊನೆಗೂ ನೀನು ಬರಲೇ ಇಲ್ಲ
ಕತ್ತಲೆ ಕವಿದ ನನ್ನ ಹೃದಯದೊಳಗೆ||

ನೀನು ನನ್ನ ರಾಧೆಯಾಗಲಿಲ್ಲ
ನಾನು ನಿನ್ನ ಕೃಷ್ಣನೂ ಅಲ್ಲ
ಯಾಕೆಂದರೆ ಎರಡು ಕೈಗಳು
ಸೇರಬೇಕು ಚಪ್ಪಾಲೆಗೆ
ಎರಡು ಮನಸ್ಸುಗಳು ಬೆಸೆಯಬೇಕು
ಪ್ರೀತಿಗೆ! ||

ನನ್ನ ಮೌನದೊಳಗೆ
ನಿನ್ನ ಕಾಲ್ಗೆಜ್ಜೆಯ ಇನಿದ್ವನಿ
ನನ್ನ ಕನಸಲ್ಲಿ ನಿನ್ನ ಮುತ್ತಿನ ಮಣಿ
ಕೊನೆಗೂ ಮೂಡಲೇ ಇಲ್ಲ
ಹೃದಯಗಳು ಬೆರೆಯಲೇ ಇಲ್ಲ
ನತದೃಷ್ಟ ನಾನು..?! ||

ಭರವಸೆಗಳು ಎಕ್ಕುಟ್ಟಿ
ಕನಸುಗಳ ಬಡಿದಟ್ಟಿ
ಜೀವ ತೇಗುತ್ತಿದೆ
ಏದುಸಿರು ಬಿಟ್ಟು..
ಆದರೂ ಭರವಸೆ ಕೈಬಿಟ್ಟಿಲ್ಲ
ಬಂದೇ ಬರುವಿಯೆಂದು..!!||

ಜಾಹೀರಾತು