7:34 AM Saturday23 - January 2021
ಬ್ರೇಕಿಂಗ್ ನ್ಯೂಸ್
ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ…

ಇತ್ತೀಚಿನ ಸುದ್ದಿ

ಡ್ರೀಮ್ ಇಲೆವನ್ ಐಪಿಎಲ್‌ 2020ಯ ಮೊದಲ ಡಬಲ್ ಹೆಡರ್ ಇಂದು

October 3, 2020, 12:13 PM

ಅಬುದಾಬಿ (Reporter Karnataka News)

ಮೊದಲ ವಾರದಲ್ಲಿಯೇ ಅನೇಕ ಏಳು ಬೀಳುಗಳೊಂದಿಗೆ ರೋಚಕವಾಗಿ ಸಾಗುತ್ತಿರುವ 13ನೇ ಆವೃತ್ತಿಯ ಐಪಿಎಲ್‌ನ ಮೊದಲ ಡಬಲ್ ಹೆಡರ್ ಪಂದ್ಯಗಳು ಇಂದು ನಡೆಯಲಿದೆ.

ಅಕ್ಟೋಬರ್ ಆಗಮನದೊಂದಿಗೆ ಪಂದ್ಯಾವಳಿಯಲ್ಲಿ ಹೊಸ ಹುರುಪು ಮೂಡಿದ್ದು, ಡಬಲ್ ಹೆಡರ್‌ಗಳ ಆಗಮನದೊಂದಿಗೆ ಹೆಚ್ಚಿನ ಮನೋರಂಜನೆ ಇನ್ನು ಕ್ರಿಕೆಟ್ ಪ್ರಿಯರಿಗೆ ಲಭ್ಯವಾಗಲಿದೆ.
10 ಡಬಲ್ ಹೆಡರ್‌ಗಳಲ್ಲಿ ಮೊದಲನೆಯ ಡಬಲ್ ಹೆಡರ್ ಇಂದು ನಡೆಯಲಿದ್ದು, ಅಬುದಾಬಿಯಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಹಿಂದಿನ ಪಂದ್ಯ ಗೆದ್ದು ಬೀಗುತ್ತಿರುವ ಆರ್‌ಸಿಬಿ ಹಾಗೂ ಹಿಂದಿನ ಪಂದ್ಯದಲ್ಲಿ ಸೋಲುಂಡ ರಾಜಸ್ತಾನ ರಾಯಲ್ಸ್ ಸೆಣಸಲಿದೆ. ಶಾರ್ಜಾದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ.

ಒಂದೇ ದಿನ ಎರಡು ಪಂದ್ಯಗಳು ನಡೆಯುವುದಕ್ಕೆ ಡಬಲ್ ಹೆಡರ್ಸ್ ಎನ್ನಲಾಗುತ್ತದೆ. ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಡಬಲ್ ಹೆಡರ್ಸ್ ಪಂದ್ಯಗಳು ವಾರಾಂತ್ಯದಲ್ಲಿ ಆಡಲಾಗುವುದು. ಭಾರತದಲ್ಲಿ ನಡೆದ ಹಿಂದಿನ ದಿನದ ಆಟಗಳಿಗಿಂತ ಅರ್ಧ ಘಂಟೆಯ ಮುಂಚಿತವಾಗಿ ದಿನದ ಪಂದ್ಯಗಳು ಮಧ್ಯಾಹ್ನ 3: 30 ಕ್ಕೆ ಪ್ರಾರಂಭವಾಗಲಿವೆ.
ಇದು ಆಟಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು ಯುಎಇಯ ತೇವಾಂಶ ಹಾಗೂ ಶಾಖದ ನಡುವೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ಸವಾಲಾಗಲಿದೆ.
ಒಟ್ಟಿನಲ್ಲಿ ರೋಚಕವಾಗಿ ಸಾಗುತ್ತಿರುವ ಕ್ರೀಡಾಕೂಟದಲ್ಲಿ ಮತ್ತಷ್ಟು ರೋಚಕತೆ ಕೂಡಿಕೊಳ್ಳಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು