5:09 PM Tuesday19 - January 2021
ಬ್ರೇಕಿಂಗ್ ನ್ಯೂಸ್
ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ

ಇತ್ತೀಚಿನ ಸುದ್ದಿ

ಮೋದಿ ನಾಮ ಬಲದ ವಿಶ್ವಾಸ: ಜನರಿಂದ ದೂರವಾಗುತ್ತಿದ್ದಾರೆ ರಾಜ್ಯ ಬಿಜೆಪಿ ಶಾಸಕರು!

December 5, 2020, 9:16 AM

ಬೆಂಗಳೂರು(reporterkarnataka news): ರಾಜ್ಯದಲ್ಲಿ ಬಿಜೆಪಿ ಶಾಸಕರು ಜನರಿಂದ, ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ದೂರವಾಗುತ್ತಿದ್ದಾರೆಯೇ. ಹೀಗೆ ಒಂದು ಪ್ರಶ್ನೆ ಜನರಲ್ಲಿ ಕಾಡತೊಡಗಿದೆ. ಇದರಲ್ಲಿ ಸತ್ಯ ಕೂಡ ಇದೆ. ಶಾಸಕರನ್ನು ಭೇಟಿ ಮಾಡಲು ಅಪಾಯಿಟ್ ಮೆಂಟ್ ಸಂಸ್ಕೃತಿ ಪಕ್ಷದಲ್ಲಿ ಮೂಡಿ ಬರುತ್ತಿದೆ ಎಂಬ ದೂರುಗಳು ವ್ಯಾಪಕವಾಗಿದೆ.

ಚುನಾವಣೆಯಲ್ಲಿ  ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಮತ್ತು ಸ್ವಾಮೀಜಿಗಳ ಮೇಲಿನ ಅಭಿಮಾನದಿಂದ ನಮ್ಮಗೆ ಮತ ಖಂಡಿತವಾಗಿಯೂ ನೀಡುತ್ತಾರೆ. ಹೀಗಿರುವಾಗ ಕೆಲಸ ಮಾಡದಿದ್ದರೂ ಪರವಾಗಿಲ್ಲ ಎಂಬ ಭಾವನೆ ಹಲವರಲ್ಲಿ ಮೂಡಿದೆ.

ಕರಾವಳಿ ಜಿಲ್ಲೆಗಳ ಹೆಚ್ಚಿನ ಶಾಸಕರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಪ್ರದೇಶದ ಹೆಚ್ಚಿನ ಶಾಸಕರು ಜನರ ನೇರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕರಾವಳಿಯಲ್ಲೂ ಕೆಲವು ಶಾಸಕರು ಜನರಿಗೆ ಲಭ್ಯವಾಗದ ಬಗ್ಗೆ ದೂರು ಕೇಳಿ ಬರುತ್ತಿದೆ.

ರಾಜ್ಯದ ಹೆಚ್ಚಿನ ಶಾಸಕರು ಸಂಜೆ 6 ಗಂಟೆಯಾದರೆ ಮೊಬೈಲ್ ನ್ನು ಆಪ್ತ ಸಹಾಯಕರ ಕೈ ಒಪ್ಪಿಸಿ ಕಣ್ಮರೆಯಾಗುತ್ತಿದ್ದಾರೆ. ಕೆಲವು ಶಾಸಕರ ಮೊಬೈಲ್ ದಿನವಿಡೀ ಪಿಎಗಳ ಕೈಯಲ್ಲೇ ಇರುತ್ತದೆ. ಕೇಳಿದರೆ ಮೀಟಿಂಗ್ ನಲ್ಲಿದ್ದಾರೆ ಎಂಬ ರೆಡಿಮೇಡ್ ಉತ್ತರ ಬರುತ್ತದೆ ಎಂದು ಜನರು ದೂರು ನೀಡುತ್ತಿದ್ದಾರೆ.

ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದಾಗ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಶಾಸಕರು ಬೆಂಗಳೂರಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದರು ಎಂಬುದನ್ನು ಪಕ್ಷದ ಹಿರಿಯ ಕಾರ್ಯಕರ್ತರು ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.

ಹೇಗಾದರೂ ಸಚಿವರಾಗಬೇಕು. ಇಲ್ಲದಿದ್ದರೆ ಲಾಭ ಇರುವ ನಿಗಮ ಮಂಡಳಿಯ ಅಧ್ಯಕ್ಷರಾಗಬೇಕು ಎಂಬ ಕನಸಿನಲ್ಲಿ ಶಾಸಕರು ತೇಲಾಡುತ್ತಿದ್ದಾರೆ ಎಂಬ ಕಟು ವಿಮರ್ಶೆ ಕೂಡ  ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು