ಇತ್ತೀಚಿನ ಸುದ್ದಿ
ಮಾಡೆಲ್ ಜತೆ ಅಸಹಜ ಲೈಂಗಿಕ ಕ್ರಿಯೆ: ಮೂವರ ಬಂಧನ, ಓರ್ವ ಆರೋಪಿ ಪರಾರಿ
January 9, 2021, 1:47 PM

ಮಾಡೆಲ್ ಜತೆ ಅಸಹಜ ಲೈಂಗಿಕ ಕ್ರಿಯೆ: ಮೂವರ ಬಂಧನ, ಓರ್ವ ಆರೋಪಿ ಪರಾರಿ
ಥಾಣೆ(reporterkarnataka news): ಪುರುಷ ರೂಪದರ್ಶಿಯನ್ನು ದರೋಡೆ ಮಾಡಿದ ಬಳಿಕ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ 19ರ ಹರೆಯದ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಥಾಣೆಯ ವಾಗ್ಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಕಾರ್ಖಾನೆ ಆವರಣಕ್ಕೆ ಯುವಕನನ್ನು ಕರೆದೊಯ್ದ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಓರ್ವ ಆರೋಪಿ ನಾಪತ್ತೆಯಾಗಿದ್ದಾನೆ.