5:13 PM Thursday25 - April 2024
ಬ್ರೇಕಿಂಗ್ ನ್ಯೂಸ್
ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ…

ಇತ್ತೀಚಿನ ಸುದ್ದಿ

ಮೊಬೈಲ್ ಚಿತ್ರೀಕರಣಗೊಂಡ ‘ಇಸಬೆಲ್ಲಾ’ ಕಿರುಚಿತ್ರಕ್ಕೆ ರಾಷ್ಟೀಯ ಮಟ್ಟದ ಪ್ರಶಸ್ತಿ…!! 

27/12/2021, 09:28

ಮಂಗಳೂರು(reporterkarnataka.com): ಯಾವುದೇ ಸಿದ್ಧಸೂತ್ರಗಳಿಲ್ಲದೆ ಕೇವಲ ಮೊಬೈಲ್ ಮೂಲಕ ಚಿತ್ರೀಕರಣಗೊಂಡು ಪ್ರತಿಷ್ಠಿತ “ಇಂಡಿಯನ್  ಫಿಲಂ ಹೌಸ್” ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ ಖುಷಿಯಲ್ಲಿ “ಇಸಬೆಲ್ಲಾ” ಕಿರು ಚಿತ್ರತಂಡ. 

ಹಲವಾರು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಂಗ ತರಬೇತಿ, ರಂಗ ಪ್ರದರ್ಶನ, ಕ್ರಿಯಾತ್ಮಕ  ಶಾಲಾ-ಕಾಲೇಜು ರಂಗ ಶಿಕ್ಷಣದ ಜೊತೆಗೆ ಹಲವಾರು ಯುವ ಪ್ರತಿಭೆಗಳನ್ನ ಚಿತ್ರರಂಗಕ್ಕೆ ನೀಡಿದ ಜಗನ್ ಪವಾರ್ ಬೇಕಲ್ ಅವರ “ಸಂಕೇತ” ಮಂಗಳೂರು, ಹೊಸ ಪ್ರತಿಭೆಗಳನ್ನ ಹುಡುಕಿ ತರಬೇತಿ ನೀಡಿ ಅವಕಾಶವನ್ನು ನೀಡುವ  ಉದ್ದೇಶದಿಂದ “ಸಂಕೇತ್ ಸಿನಿಮಾಸ್” ಎಂಬ ವೇದಿಕೆಯ ಮೂಲಕ ಹಲವಾರು ಕಿರುಚಿತ್ರಗಳನ್ನ  ಯಾವುದೇ ಕಟ್ಟುಪಾಡುಗಳಿಲ್ಲದೆ ಲಭ್ಯವಿರುವ ಸಂಪನ್ಮೂಲಗಳಿಂದ  ಹೀಗೂ ಕೂಡ ಚಿತ್ರಗಳನ್ನ ನಿರ್ಮಿಸಬಹುದು ಎಂಬ ಕಲಿಕಾ ಕಾರ್ಯ ಪ್ರವರ್ತಿಯ ಮಾನದಂಡಕ್ಕೆ ಕೈಗನ್ನಡಿ ಹಿಡಿಯುತಿಯುವಂತಿದೆ ..

ಭವಿಷ್ಯದಲ್ಲಿ ತಾನು ಒಬ್ಬ  ಒಳ್ಳೆಯ ನಿರ್ದೇಶಕನಾಗಬೇಕು ಎಂಬ ಕನಸು ಹೊತ್ತ ನವ ಯುವಕ ವಿಷ್ಣು ಜಿ.  ಮೂಲತಃ ಒಬ್ಬ ಮಲಯಾಳಿಯಾಗಿ ತನ್ನ ಕರ್ಮಭೂಮಿಯಾಗಿ ಮಂಗಳೂರನ್ನೇ ಆಯ್ದುಕೊಂಡು ಸಿನಿಮಾ ನೋಡೋ ಹುಚ್ಚಿನಿಂದಾಗಿ ಮಂಗಳೂರಿನ ಪಾಂಡೇಶ್ವರ ಪಿವಿಆರ್ ಸಿನಿಮಾಸ್ ನಲ್ಲಿ  ಕೆಲಸಕ್ಕೆ ಸೇರಿಕೊಂಡರು….”ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು” ಚಿತ್ರದ ಪ್ರಚಾರಕ್ಕಾಗಿ ತಂಡ ಸಿನಿಮಾ ಮಂದಿರ  ಭೇಟಿಕೊಟ್ಟ  ಸಂದರ್ಭದಲ್ಲಿ ತಂಡದ ಜೊತೆಗಿದ್ದ ಚಿತ್ರ ನಟ  ಯೋಗೀಶ್ ಶೆಟ್ಟಿ ಯವರ ಮೂಲಕ ಜಗನ್ ಪವಾರ್ ಭೇಟಿಯೊಂದಿಗೆ ಸಂಕೇತದೊಂದಿಗಿನ  ಬೆಸೆದ ನಂಟು, ತದನಂತರ ತಂಡ ಇತರ ಸದಸ್ಯರೊಂದಿಗೆ ಕಲಿಕೆಯಲ್ಲಿ ತೊಡಗಿಕೊಂಡು  ಗುರುಗಳಾದ ಜಗನ್ ಪವಾರ್ ಆಶಯದೊಂದಿಗೆ  “ಸಂಕೇತ್ ಸಿನಿಮಾಸ್” ನ ಮೂಲಕ ರಂಗಭೂಮಿ-ಚಲನಚಿತ್ರ ನಟ ಯೋಗೀಶ್ ಶೆಟ್ಟಿ ನಿರ್ಮಾಣದೊಂದಿಗೆ “ಇಸಬೆಲ್ಲಾ” ಎಂಬ ಪ್ರಯೋಗತ್ಮಕ ಮೂಕ ಚಿತ್ರದ ಮೂಲಕ ತನ್ನದೇ  ಚಿತ್ರಕಥೆಯೊಂದಿಗೆ ನಿರ್ದೇಶಕನಾಗುವ ಅವಕಾಶ ಪಡೆದ ವಿಷ್ಣು, ತನ್ನ ಚೊಚ್ಚಲ  ಪ್ರಯತ್ನದಲ್ಲೇ ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ   ಭಾಗ್ಯವಂತ  . ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ  ನಟಿ, ಅತ್ಯುತ್ತಮ ಕಥೆ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದು ಕೊನೆಯ ಹಂತದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಚಿತ್ರದ ನಟಿ ಅನುಶ್ರೀ ಅವರು ಪಡೆದುಕೊಂಡರು, 

 ಅನುಶ್ರೀ  ಮಂಗಳೂರಿನ ಸಂತ  ಅಲೋಶಿಯಸ್ ಕಾಲೇಜು ನ ಪದವಿ ವಿದ್ಯಾರ್ಥಿಯಾಗಿದ್ದು,ಕಾಲೇಜು ರಂಗ ಶಿಕ್ಷಣ ಮೂಲಕ ಜಗನ್ ಪವಾರ್ ರವರಿಗೆ ಪರಿಚಯಗೊಂಡು ಚಿತ್ರದಲ್ಲಿ ಅಭಿನಯಿಸುವಂತಾಯಿತು. ಸಹ ನಟನಾಗಿ ಲತೇಶ್ ಕಾಂಚನ್ ಅಭಿನಯಿಸಿದ್ದಾರೆ . ಹಲವಾರು ಚಲನಚಿತ್ರಗಳಲ್ಲಿ ಛಾಯಾಗ್ರಾಹಕನಾಗಿ ಅಪಾರ ಅನುಭವ ಹೊಂದಿರುವ ಮೋಹನ್ ಪಡ್ರೆ ಚಿತ್ರವನ್ನ  ಉತ್ತಮವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಡಿಪಿನ್ ಪ್ರಭಾಕರ್  ಚಿತ್ರದ ಸಂಕಲನದ ಜೊತೆಗೆ ಪೋಸ್ಟರ್ ಡಿಸೈನ್  ಮಾಡಿದ್ದು, ಯುವ ಸಂಗೀತ ನೀರ್ದೇಶಕ ನಿಶ್ಚಿತ್ ರಾಜ್ ಹಿನ್ನಲೆ ಸಂಗೀತ ಹಾಗೂ ಸ್ವರ ವಿನ್ಯಾಸದ ಇಂಪನ್ನು ನೀಡಿರುವರು, ಮಂಗಳೂರು ಬಲ್ಮಠ ಸಪ್ತಕ್ ರೆಕಾರ್ಡಿಂಗ್ಸ್ – ಚಿದಾನಂದ್ ಕಡಬ ರವರ ಸ್ವರ ಮಿಶ್ರಣದೊಂದಿಗೆ ಚಿತ್ರಕ್ಕೆ ಪ್ರಶಸ್ತಿ ಬರಲು ಕಾರಣೀಕರ್ತರಾದರು, ರಂಗಕರ್ಮಿ-ಚಲನಚಿತ್ರ ನಟ ವಿನೋದ್ ಶೆಟ್ಟಿ ಕೃಷ್ಣಾಪುರ ಬೆಂಬಲ “ಸಂಕೇತ ” ಆಶಯಕ್ಕೆ  ಬಲವನ್ನು ನೀಡಿತು.

ಇತ್ತೀಚಿನ ಸುದ್ದಿ

ಜಾಹೀರಾತು