ಇತ್ತೀಚಿನ ಸುದ್ದಿ
ಮೊಬೈಲ್ ಕೊಡದಕ್ಕೆ ಕೋಪಗೊಂಡು ಬಾತ್ ರೂಂ ಚಿಲಕ ಹಾಕಿಕೊಂಡ ಬಾಲಕ : ಅಗ್ನಿ ಶಾಮಕ ದಳದಿಂದ ರಕ್ಷಣೆ
January 2, 2021, 9:04 PM

ಮಣಿಪಾಲ(reporterkarnataka news): ತಾಯಿ ಮೊಬೈಲ್ ಕಸಿದುಕೊಂಡು ಕಾರಣಕ್ಕೆ ಕೋಪಗೊಂಡ 12ರ ಬಾಲಕನೊಬ್ಬ ತಾಸುಗಟ್ಟಲೆ ಬಾತ್ ರೂಂ ನಲ್ಲಿ ಚಿಳಕ ಹಾಕಿ ಕುಳಿತು ಕೊಂಡು ಕೊನೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರ ತಂದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಎಂಐಟಿಯ ಎ1 ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಇಡೀ ದಿನ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ಬಾಲಕ ಲಿಯಾನ್ ಗೆ ಆತನ ತಾಯಿ ಕಲಾ ಅವರು ಬೈದು ಆತನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಕ್ಕಾಪಟ್ಟೆ ಕೋಪಗೊಂಡ ಬಾಲಕ ಬಾತ್ರೂಮ್ ಬಾಗಿಲು ಹಾಕಿ ಒಳಗೆ ಕೂತುಬಿಟ್ಟ. ತಾಯಿ ಅದೆಷ್ಟು ಕರೆದು ಮನವೊಲಿಸಿದರೂ ಆತ ಬಾಗಿಲು ತೆರೆಯಲೇ ಇಲ್ಲ. ಕೊನೆಗೆ ಆತಂಕಗೊಂಡ ಬಾಲಕನ ತಾಯಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು.
ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ 4ನೇ ಮಹಡಿಗೆ ಹಗ್ಗದ ಸಹಾಯದಿಂದ ಇಳಿದು ಬಾತ್ ರೂಮ್ ಕಿಟಿಕಿ ಮುರಿದು ಒಳ ಪ್ರವೇಶಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದ ಬಾಲಕನ ರಕ್ಷಣೆ ಮಾಡಿದ್ದಾರೆ.