ಇತ್ತೀಚಿನ ಸುದ್ದಿ
ಮಂಗಳೂರಿನಿಂದ ಮಾಲ್ಡೀವ್ಸ್ ದ್ವೀಪಕ್ಕೆ ಮೊದಲ ಬಾರಿ ತರಕಾರಿ, ಹಣ್ಣು-ಹಂಪಲು ರಫ್ತು!
December 13, 2020, 8:29 AM

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ಕಡಲ ನಗರಿ ಮಂಗಳೂರಿನ ವಾಣಿಜ್ಯ ವಹಿವಾಟು ಅಭಿವೃದ್ಧಿಯ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಮಂಗಳೂರಿನ ಹಳೆ ಬಂದರಿನಿಂದ ಮಾಲ್ಡೀವ್ಸ್ ಗೆ ತರಕಾರಿ ಮತ್ತು ಹಣ್ಣುಗಳ ರಫ್ತು ಆಗಲಿದೆ.
ಕೊರೊನಾದಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗೆ ಪಾಲಿಶ್ ಉಜ್ಜುವ ದೃಷ್ಟಿಯಿಂದ ರಫ್ತಿಗೆ ಉತ್ತೇಜನ ನೀಡಲಾಗಿದೆ. ಮಂಗಳೂರಿನಿಂದ ಹೊರ ದೇಶಗಳಿಗೆ ತರಕಾರಿ, ಹಣ್ಣು- ಹಂಪಲು ರಫ್ತು ಆಗುವುದು ಇದೇ ಮೊದಲ ಬಾರಿಯೇನಲ್ಲ. ಕೊರೊನಾ ಪೂರ್ವದಲ್ಲೇ ಕೊಲ್ಲಿ ರಾಷ್ಟ್ರ ಸೇರಿದಂತೆ ಹೊರ ದೇಶಗಳಿಗೆ ಪ್ರತಿದಿನ ತರಕಾರಿ, ಹಣ್ಣು- ಹಂಪಲು ಹಾಗೂ ಮಲ್ಲಿಗೆ ರಫ್ತು ಆಗುತ್ತಿತ್ತು. ವಿಮಾನದ ಮೂಲಕ ಸಾಗಾಟ ನಡೆಯುತ್ತಿತ್ತು. ಅದೇ ರೀತಿ ಮಂಗಳೂರು ಹಾಗೂ ಉಡುಪಿಯಿಂದ ಭಾರಿ ಪ್ರಮಾಣದಲ್ಲಿ ಮೀನು ರಫ್ತು ಆಗುತ್ತಿದೆ. ಇಲ್ಲಿನ ಸಿಗಡಿಗೆ ವಿದೇಶದಲ್ಲಿ ಭಾರಿ ಬೇಡಿಕೆಯಿದೆ. ಅದೇ ರೀತಿ ಇಲ್ಲಿನ ಏಡಿಗೆ ಮಲೇಷಿಯಾದಲ್ಲಿ ಭಾರಿ ಡಿಮಾಂಡ್ ಇದೆ. ಥರ್ಮಾಕೋಲ್ ಬಳಸಿ ನಿರ್ಮಿಸಿದ ಬಾಕ್ಸ್ ನಲ್ಲಿ ಜೀವಂತ ಏಡಿಯನ್ನು ರಫ್ತು ಮಾಡಲಾಗುತ್ತದೆ.
ಇದೀಗ ವಿಶೇಷ ಸರಕು ಸಾಗಾಟ ಹಡಗಿನ ಮೂಲಕ ಕರಾವಳಿಯ ಹಣ್ಣು ಮತ್ತು ತರಕಾರಿ ಉತ್ಪನ್ನಗಳು ಮಾಲ್ದೀವ್ಸ್ ತಲುಪಲಿದೆ.