ಇತ್ತೀಚಿನ ಸುದ್ದಿ
ಮಂಗಳೂರು ಕ್ಷೇತ್ರದ 7 ಗ್ರಾಪಂಗಳ 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ
December 13, 2020, 8:35 AM

ಮಂಗಳೂರು(reporterkarnataka news) :
ಮಾಜಿ ಸಚಿವ, ಕಾಂಗ್ರೆಸ್ ನ ಯು.ಟಿ.ಖಾದರ್ ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭೆ ಕ್ಷೇತ್ರದ 7 ಗ್ರಾಮ ಪಂಚಾಯಿತಿಗಳಲ್ಲಿ 7 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಲಪಾಡಿ ಗ್ರಾಮ ಪಂಚಾಯಿತಿ 5ನೇ ವಾರ್ಡ್ನಲ್ಲಿ ಗೀತಾ ನಾಯ್ಕ್, ಕಿನ್ಯಾ ಗ್ರಾಮ ಪಂಚಾಯಿತಿ 2ನೇ ವಾರ್ಡ್ನಲ್ಲಿ ಬಾಗಿ, ಮುನ್ನೂರು ಗ್ರಾಮ ಪಂಚಾಯಿತಿ 6ನೇ ವಾರ್ಡ್ನಲ್ಲಿ ಪುಷ್ಪ, ಬೆಳ್ಮ ಪಂಚಾಯಿತಿ1ನೇ ವಾರ್ಡ್ನಲ್ಲಿ ಸುಂದರಿ, ಪಜೀರ್ ಪಂಚಾಯಿತಿ 2ನೇ ವಾರ್ಡ್ನಲ್ಲಿ ವಸಂತಿ, ತುಂಬೆ ಪಂಚಾಯಿತಿ 1ನೇ ವಾರ್ಡ್ನಲ್ಲಿ ಜಯಂತಿ ಕೇಶವ, ಮೇರಮಜಲ್ ಪಂಚಾಯಿತಿ 1ನೇ ವಾರ್ಡ್ನಲ್ಲಿ ವಿಮಲ ನಾಯಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.