ಇತ್ತೀಚಿನ ಸುದ್ದಿ
ಮೆಹಬೂಬ ಮುಫ್ತಿ ಗೃಹಬಂಧನದಲ್ಲಿ ಇಲ್ಲ: ಜಮ್ಮು- ಕಾಶ್ಮೀರ ಸರಕಾರ ಸ್ಪಷ್ಟನೆ
November 28, 2020, 9:16 AM

ಶ್ರೀನಗರ: ಪಿಡಿಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಪ್ತಿ ಅವರನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ವರದಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ತಳ್ಳಿಹಾಕಿದೆ.
ಇದು ಆಧಾರ ರಹಿತ ವರದಿ ಎಂದು ಸರ್ಕಾರ ಪ್ರತಿಕ್ರಿಯಿಸಿದೆ. ಭದ್ರತಾ ಕಾರಣಗಳಿಗಾಗಿ ಕೆಲವು ನಿರ್ಬಂಧ ವಿಧಿಸಲಾಗಿದೆ. ಯಾವುದೇ ರೀತಿಯ ಗೃಹ ಬಂಧನ ಹೇರಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.