ಇತ್ತೀಚಿನ ಸುದ್ದಿ
ಮಾಯಾ ನಗರಿ ಮುಂಬೈನಲ್ಲಿ ಕೊರೊನಾ ಅಬ್ಬರ: ಒಂದೇ ದಿನ 36 ಬಲಿ: 1,50,535 ಮಂದಿ ಗುಣಮುಖ
September 22, 2020, 8:19 AM

ಮುಂಬೈ(reporterkarnataka news): ಮಾಯಾ ನಗರಿ ಮುಂಬೈನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಮುಂಬೈಯಲ್ಲಿ 1837 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ಇದೀಗ 1, 86, 150ಕ್ಕೆ ತಲುಪಿದೆ. ಕೊರೋನಾ ಸೋಂಕಿತ 1, 50, 535 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ.
ಮುಂಬೈ ಯಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ 36 ಮಂದಿಯನ್ನು ಬಲಿಪಡೆದುಕೊಂಡಿದೆ.
ಇದರೊಂದಿಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 8502ಕ್ಕೆ ತಲುಪಿದೆ. ಒಂದೇ ದಿನದಲ್ಲಿ 2728 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ