9:10 AM Thursday3 - December 2020
ಬ್ರೇಕಿಂಗ್ ನ್ಯೂಸ್
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ  ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ ಬುಕ್… ಮಂಗಳೂರು ಏರ್ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರಿಡುವಂತೆ ಆಗ್ರಹಿಸಿ ಡಿ.7ರಂದು ಬೈಕ್ ಜಾಥಾ ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್ ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು

ಇತ್ತೀಚಿನ ಸುದ್ದಿ

ಮತ್ತೆ ಬರುತ್ತಾ ಸಂಡೇ ಲಾಕ್ ಡೌನ್?: ಸರಕಾರಕ್ಕೆ ತಲೆನೋವಾದ ಕೊರೊನಾ ಹೆಚ್ಚಳ

September 28, 2020, 7:57 AM

ಬೆಂಗಳೂರು(reporterkarnataka news): ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಭಾನುವಾರ ಲಾಕ್ ಡೌನ್ ಹೇರುವ ಕುರಿತು ಜಿಜ್ಞಾಸೆ ಆರಂಭವಾಗಿದೆ. ಸರಕಾರದ ಕಡೆಯಿಂದ ಇಂತಹ ಒಂದು ಸುಳಿವು ದೊರಕಿರುವುದೇ ಇದಕ್ಕೆಲ್ಲ ಕಾರಣ.

ಎಲ್ಲವೂ ಅನ್ ಲಾಕ್ ಆಗುತ್ತಿದ್ದಂತೆ ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗಲಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಇದು ಆಯಾ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ತಲೆನೋವಿಗೆ ಕಾರಣವಾಗಿದೆ.

ಯಾವುದೇ ಕಾರಣಕ್ಕೂ ಮತ್ತೆ ಲಾಕ್ ಡೌನ್ ಹೇರ ಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮನ್ ಕಿ ಬಾತ್ ನಲ್ಲಿ ರಾಜ್ಯಗಳಿಗೆ ಸೂಚಿಸಿದ್ದರು. ಆದರೆ ಪರಿಸ್ಥಿತಿ ಗಂಭೀರತೆ ಕಡೆಗೆ ಚಲಿಸುತ್ತಿರುವುದು ರಾಜ್ಯ ಸರಕಾರವನ್ನು ವಿಚಲಿತವನ್ನಾಗಿ ಮಾಡಿದೆ. ವಾರ, ತಿಂಗಳು ಲಾಕ್ ಡೌನ್ ಮಾಡುವ ಬದಲು ಮತ್ತೆ ಪ್ರತಿ ಭಾನುವಾರ ಕರ್ಫ್ಯೂ ವಿಧಿಸಿ ಸಂಪೂರ್ಣ ಲಾಕ್ ಡೌನ್ ಮಾಡುವ ಕುರಿತು ಚಿಂತನೆ ಶುರುವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು