1:36 PM Saturday5 - December 2020
ಬ್ರೇಕಿಂಗ್ ನ್ಯೂಸ್
ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ…

ಇತ್ತೀಚಿನ ಸುದ್ದಿ

ಸೆಪ್ಟೆಂಬರ್ 27 : ಅಮೃತಪುರಿಯಲ್ಲಿ  ಮಾತಾ ಅಮೃತಾನಂದಮಯಿ ದೇವಿ ಜನ್ಮದಿನಾಚರಣೆ

September 23, 2020, 7:00 PM

 ಮಂಗಳೂರು(reporterkarnataka news):

ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ- ಅಮ್ಮ ನವರ ಜನ್ಮದಿನಾಚರಣೆ ಯನ್ನು ಸೆಪ್ಟೆಂಬರ್ 27ರಂದು ಅಮೃತಪುರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ .

ಅಮ್ಮನವರು ಈ ಬಾರಿ ತಮ್ಮ ಜನ್ಮ ದಿನಾಚರಣೆ ಕಾರ್ಯಕ್ರಮ ಮಾಡಲು ಆಸಕ್ತಿ ಹೊಂದಿರುವುದಿಲ್ಲ. ಅಮ್ಮನ ಆಶ್ರಮದ ಶಿಷ್ಯರು, ಭಕ್ತರ ಆಶಯದಂತೆ ಸಭೆ ಸೇರಿ ಈ ಬಾರಿಯ ಅಮ್ಮನ ಜನ್ಮದಿನೋತ್ಸವವನ್ನು ಇಡೀ ದಿನ ನಿಃಸ್ವಾರ್ಥ ಸೇವೆ ಹಾಗೂ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿರುತ್ತಾರೆ.

ಪ್ರಸ್ತುತ ಇಡೀ ಜಗತ್ತು ಪ್ರೀತಿ, ಶಾಂತಿ ಮತ್ತು ಸುರಕ್ಷತೆಯನ್ನು ಅನುಭವಿಸಲು ಸುರಂಗದೊಳಗಿನ ಅಂಧಕಾರದಿಂದ ಹೊರಬರಲು ಸುರಂಗದ ಕೊನೆಯಲ್ಲಿರುವ ಬೆಳಕನ್ನು ನೋಡಲು  ಬಯಸುವಂತೆ  ಕಾತರದಿಂದ ಕಾಯುತ್ತಿದೆ. ಸೆಪ್ಟೆಂಬರ್ 27ರಂದು ಪ್ರಪಂಚದಾದ್ಯಂತ ನೆಲೆಸಿರುವ ಅಮ್ಮನ ಭಕ್ತರು ಒಂದಾಗಿ ಸೇರಲು ಮತ್ತು ಪ್ರಕೃತಿ ಮಾತೆಯ ಕ್ಷಮೆ, ಶಾಂತಿ ಹಾಗೂ ಎಲ್ಲಾ ಸೃಷ್ಟಿಗೆ ಗುಣಮುಖರಾಗಲು ಬಯಸುವ ಮತ್ತೊಂದು ಅವಕಾಶ ಒದಗಿಸಿದೆ.
” ಒಂದು ಜಗತ್ತು, ಒಂದು ಪ್ರಾರ್ಥನೆ ” ಎಂಬ ಧ್ಯೇಯ ವಾಕ್ಯ ದೊಂದಿಗೆ ಈ ಬಾರಿ ಅವರವರ ಮನೆಗಳಲ್ಲಿ ಕುಳಿತು ಸಾಧನೆ ಮಾಡುವ ಮೂಲಕ ಅಮ್ಮನ ಜನ್ಮದಿನ ಆಚರಿಸಲು ನಿರ್ಧರಿಸಲಾಗಿದೆ.
ಭಕ್ತಿಯ ಸಾಧನೆಯ ಸಮಯ ಬೆಳಗ್ಗೆ 6.00 ರಿಂದ ಮಧ್ಯಾಹ್ನ 1.00 ಗಂಟೆ. ಅಮೃತಪುರಿ ಹಾಗೂ ಭಕ್ತರು ಮನೆಗಳಲ್ಲಿ ಅಂದು ಧ್ಯಾನ, ಜಪ, ಗುರುಪಾದುಕಾಪೂಜೆ, “ಲೋಕಾಃ ಸಮಸ್ತಾಃ ಸುಖಿನೋ ಭವಂತು” ( 108 ಬಾರಿ) ,ಮೃತ್ಯುಂಜಯ ಮಂತ್ರ ( 108 ಬಾರಿ), ಅದೇರೀತಿ ಪ್ರಕೃತಿಯಲ್ಲಿ ಕುಳಿತು ಜಪ, ಶ್ವೇತ ಪುಷ್ಪ ಶಾಂತಿ ಧ್ಯಾನ, ಜಾಗೃತ ನಡಿಗೆಯೊಂದಿಗೆ ಜಪ, ಭಜನೆ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಮ್ಮನ ಭಕ್ತರು ಅವರವರ ಮನೆಗಳಲ್ಲಿ ಕುಳಿತು  ಲೋಕ ಕಲ್ಯಾಣಾರ್ಥ  ಏಕಕಾಲದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ..

ಇತ್ತೀಚಿನ ಸುದ್ದಿ

ಜಾಹೀರಾತು