ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ದೇಶದಲ್ಲಿ ಒಂದೇ ದಿನ 391 ಬಲಿ: 39,109 ಮಂದಿ ಗುಣಮುಖ
December 7, 2020, 11:13 AM

ನವದೆಹಲಿ(reporterkarnataka news): ದೇಶದಲ್ಲಿ ಕೊರೊನಾದ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 32, 981 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಕೊರೊನಾಕ್ಕೆ ಒಂದೇ ದಿನ 391 ಮಂದಿ ಬಲಿಯಾಗಿದ್ದಾರೆ.
ಕೊರೊನಾಕ್ಕೆ ಇದುವರೆಗೆ 1,40 ,573 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,77 ,203 ಕ್ಕೆ ತಲುಪಿದೆ. ಕೊರೊನಾ ಸೋಂಕಿನಿಂದ ಇದುವರೆಗೆ 91, 39, 901 ಮಂದಿ ಮುಕ್ತಿ ಪಡೆದಿದ್ದಾರೆ.
3, 96, 729 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 39, 109 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.