ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ದೇಶದಲ್ಲಿ ಒಂದೇ ದಿನ 512 ಮಂದಿ ಬಲಿ, 42,533 ಗುಣಮುಖ
December 5, 2020, 12:22 PM

ನವದೆಹಲಿ(reporterkarnataka news): ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 36,652 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾಕ್ಕೆ ಒಂದೇ ದಿನ 512 ಮಂದಿ ಬಲಿಯಾಗಿದ್ದಾರೆ.
ಕೊರೊನಾ ಇದುವರೆಗೆ 1,39 ,700 ಮಂದಿಯ ಪ್ರಾಣ ಬಲಿಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,08 ,211 ಕ್ಕೆ ತಲುಪಿದೆ. ಕೊರೊನಾ ಸೋಂಕಿನಿಂದ ಇದುವರೆಗೆ 90, 58, 822 ಮಂದಿ ಗುಣಮುಖರಾಗಿದ್ದಾರೆ.
4, 06, 689ಮಂದಿ ದೇಶದ ವಿವಿಧ ಕೋವಿಡ್ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 42,533 ಮಂದಿ ಕೊರೊನಾ ಸೋಂಕಿನಿಂದ ಮುಕ್ತಿಪಡೆದಿದ್ದಾರೆ.