ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ದೇಶದಲ್ಲಿ ಒಂದೇ ದಿನ 412 ಬಲಿ: 37,725 ಮಂದಿ ಗುಣಮುಖ
December 10, 2020, 11:59 AM

ನವದೆಹಲಿ(reporterkarnataka news): ದೇಶದಲ್ಲಿ ಕೊರೊನಾದ ಹಾವಳಿ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 31, 522 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾಕ್ಕೆ ಒಂದೇ ದಿನ 412 ಮಂದಿ ಬಲಿಯಾಗಿದ್ದಾರೆ.
ಮಾರಕ ಕೊರೊನಾ ಇದುವರೆಗೆ 1,41 ,772 ಮಂದಿಯ ಪ್ರಾಣ ಅಪಹರಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97,67,372 ಕ್ಕೆ ತಲುಪಿದೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ 92, 53, 306 ಮಂದಿ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. 3, 72, 293 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 37, 725 ಮಂದಿ ಕೊರೊನಾದಿಂದ ಮುಕ್ತಿ ಪಡೆದಿದ್ದಾರೆ.