ಇತ್ತೀಚಿನ ಸುದ್ದಿ
ಮಣ್ಣಗುಡ್ಡೆ ಸಂಘನಿಕೇತನದಲ್ಲಿ ಸರಳ ಸಾರ್ವಜನಿಕ ಗಣೇಶೋತ್ಸವ
August 22, 2020, 7:50 AM

ಮಂಗಳೂರು(reporterkarnataka news):
ನಗರದ ಮಣ್ಣಗುಡ್ಡೆ ಸಮೀಪದ ಪ್ರತಾಪ ನಗರದ ಸಂಘನಿಕೇತನದಲ್ಲಿ 73ನೇ ವರ್ಷದ
ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ.
ಶುಕ್ರವಾರ ಮಹಾ ಗಣಪತಿ ದೇವರ ವಿಗ್ರಹವನ್ನು ಸರಳ ರೀತಿಯಲ್ಲಿ ಸಂಘನಿಕೇತನದ ಸಭಾಂಗಣಕ್ಕೆ ತರಲಾಯಿತು . ಈ ಸಂದರ್ಭದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ , ರಘುವೀರ್ ಕಾಮತ್ , ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕಾರ್ಯದರ್ಶಿಗಳಾದ ಸತೀಶ್ ಪ್ರಭು , ಸುರೇಶ್ ಕಾಮತ್ , ಜೀವನ್ ರಾಜ್ ಶೆಣೈ , ಕೋಶಾಧಿಕಾರಿ ರವೀಂದ್ರ ಕುಡ್ವ , ಅಭಿಷೇಕ್ ಭಂಡಾರಿ , ಕೆ . ಪದ್ಮನಾಭ ಉಪಸ್ಥಿತರಿದ್ದರು .