ಇತ್ತೀಚಿನ ಸುದ್ದಿ
ಮಣಿ ಕೃಷ್ಣಸ್ವಾಮಿ ಅಕಾಡಮಿಯಿಂದ ಆನ್ಲೈನ್ ಮೂಲಕ 500ನೇ ಸಂಗೀತ ಕಛೇರಿ
December 4, 2020, 6:22 PM

ಮಂಗಳೂರು(reporterkarnataka news): ಮಣಿ ಕೃಷ್ಣಸ್ವಾಮಿ ಅಕಾಡಮಿಯ ವತಿಯಿಂದ ಏಪ್ರಿಲ್ ೫ ರಿಂದ ಆನ್ಲೈನ್ ಮೂಲಕ ಪ್ರಾರಂಭವಾದ ಸಂಗೀತ ಕಛೇರಿಯೂ ಡಿ.೬ಕ್ಕೆ ತನ್ನ ೫೦೦ ನೇ ಸಂಗೀತ ಕಛೇರಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುವುದನ್ನು ಪ್ರಧಾನ ಮಂತ್ರಿಗಳು ತಿಳಿಸಿದ್ದು, ಅದನ್ನು ನಾವು ಈ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದು, ಅನೇಕ ಸಂಗೀತಗಾರರಿಗೆ ಅವಕಾಶ ಕಲ್ಪಿಸಿದ್ದೇವೆ ಎಂದರು.
ಕೇವಲ ಜಿಲ್ಲೆಯ ಸಂಗೀತಗಾರರು ಮಾತ್ರವಲ್ಲದೇ ಹೊರ ರಾಜ್ಯ ವಿದೇಶಗಳಿಂದಲೂ ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದು, ಪ್ರತೀ ದಿನ ೧ ರಿಂದ ೨ ಲಕ್ಷ ಜನ ಸಂಗೀತ ಕಛೇರಿಯನ್ನು ವೀಕ್ಷಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಮಹಾರಾಜ್ ಶುಭ ಆರೈಸಿದ್ದಾರೆ ಎಂದರು.
ಆನ್ಲೈನ್ ಅಲ್ಲಿ ಈಗಾಗಲೇ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದು, ಮುಂದೇಯೂ ಈ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಮುಂದುವರಿಸಲಾಗುವುದು ಎಂದ ಅವರು ಈ ರ್ಕಾಕ್ರಮದ ಯಶಸ್ಸಿಗೆ ಕಾರಣರಾದ ಶ್ರೀವಿಭ ರಾವ್ ಅವರನ್ನು ಈ ಸಂದರ್ಭ ಗೌರವಿಸಿದರು.
ಅಕಾಡಮಿಯ ಪ್ರಮುಖರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಿ. ನಿತ್ಯಾನಂದ ರಾವ್, ಆನಂದ ರಾವ್, ನಾಗೇಶ್ ಎ ಬಪ್ಪನಾಡು ಇದ್ದರು.