ಇತ್ತೀಚಿನ ಸುದ್ದಿ
ಮಂಗಳೂರು ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವೈಭವದ ಆಚರಣೆ
December 25, 2020, 8:12 PM

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka news) : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪರ್ವ ದಿನಂದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗು ಪೂಜಾ ಪುರಸ್ಕಾರಗಳು ಸಹಸ್ರಾರು ಭಜಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು .
ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿಯ ಸಹಭಾಗಿತ್ವ ದಲ್ಲಿ ನಡೆಯುವ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ ಮಾರ್ಗಶಿರ ಮಾಸದ ಶು.ಏಕಾದಶಿ ತಾ. 25/12/2020 ಶುಕ್ರವಾರ ದಂದು ಪ್ರಾತಃ 6 ಗಂಟೆಗೆ ಪ್ರಾರಂಭಗೊಂಡಿತು. ಅಹೊರಾತ್ರಿ ಭಜನೆ ಸೇವೆ ನಡೆಯಲಿದ್ದು ಊರ-ಪರಊರಿನ ಸುಮಾರು 30 ಭಜನಾ ಮಂಡಳಿಗಳು ಈ ಸೇವೆಯಲ್ಲಿ ಪಾಲ್ಗೊಳ್ಳುವವರು.
ಮರುದಿನ ಪ್ರಾತಃ 5.30ಫಂಟೆಗೆ ಮಂಗಲದ ಬಳಿಕ ಶ್ರೀ ದೇವರ ಕೆರೆ ಸ್ನಾನ, ಪೇಟೆ ಉತ್ಸವ ನಡೆಯುವುದು. ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ. ಪಿ. ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು .