10:48 AM Sunday17 - January 2021
ಬ್ರೇಕಿಂಗ್ ನ್ಯೂಸ್
ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ ಎಲ್ಲ ಕಾಮಗಾರಿಗಳಿಗೆ ತಾತ್ಕಾಲಿಕ ಬ್ರೇಕ್ : ಇದಕ್ಕೆಲ್ಲ ಕಾರಣ ಏನು ಗೊತ್ತೇ…? 

December 29, 2020, 5:19 PM

ಅಶೋಕ್ ಕಲ್ಲಡ್ಕ ಮಂಗಳೂರು
ಚಿತ್ರ: ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿಯಡಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆಗಿರುವ ಅಕ್ಷಯ್ ಶ್ರೀಧರ್ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕಾರಣ ಏನು?: ಸಿ ಆ್ಯಂಡ್ ಡಿ ವೇಸ್ಟ್ ಮ್ಯಾನೇಜ್ ಮೆಂಟ್ ರೂಲ್ಸ್ 2016 ಜಾರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಎಲ್ಲ ಕಾಮಗಾರಿಗಳಿಗೆ ತಾತ್ಕಾಲಿಕ ತಡೆಯೊಡ್ಡಿದೆ.

ಏನಿದು ಸಿ ಆ್ಯಂಡ್ ಡಿ ವೇಸ್ಟ್ ?: ಕನ್ ಸ್ಟ್ರಕ್ಷನ್ ಆ್ಯಂಡ್ ಡೆಮೋಲಿಶನ್ ವೇಸ್ಟ್ ಮ್ಯಾನೇಜ್ ಮೆಂಟ್(ನಿರ್ಮಾಣ ಮತ್ತು ಉರುಳಿಸುವ ತ್ಯಾಜ್ಯ) ಅಂದ್ರೆ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಕೆಡಹುವಾಗ ಉಂಟಾಗುವ ತ್ಯಾಜ್ಯ ನಿರ್ವಹಣೆ ಕುರಿತಾಗಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮೂಲಕ ಇದು ರಾಜ್ಯದಲ್ಲಿ 2016ರಿಂದ ಜಾರಿಯಲ್ಲಿದೆ. ರಾಜ್ಯದ ವಿವಿಧ ನಗರಗಳಲ್ಲಿ ಇದನ್ನು ಜಾರಿಗೊಳಿಸುವ ಕುರಿತು ಹೈಕೋರ್ಟ್ ನ ಸ್ಪಷ್ಟ ಸೂಚನೆಯೂ ಇದೆ. ಮಂಗಳೂರು ಮಹಾನಗರಪಾಲಿಕೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಿ ಆ್ಯಂಡ್ ಡಿ ಪಾಲನೆ ಕುರಿತು ಹೈಕೋರ್ಟ್ ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ ಅವರಲ್ಲಿ ಪ್ರಶ್ನಿಸಿತ್ತು. ಜಾರಿಗೆ ಎಲ್ಲ ಕ್ರಮ ಕೈಗೊಳ್ಳುವ ಬಗ್ಗೆ ಎಂಡಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿ ಆ್ಯಂಡ್ ಡಿ ವೇಸ್ಟ್ ಜಾರಿಗೊಳಿಸುವ ವರೆಗೆ ಕಾಮಗಾರಿ ನಿಲ್ಲಿಸಲು ಆದೇಶ ನೀಡಲಾಗಿದೆ.

ಯಾರು ನಿರ್ಮಾಣ ಮತ್ತು ಕೆಡಹುವ(ಉರುಳಿಸುವ) ಕೆಲಸ ಮಾಡಿಸುತ್ತಾರೆಯೋ ಅವರಿಗೆಲ್ಲ ಸಿ ಆ್ಯಂಡ್ ಡಿ ವೇಸ್ಟ್ ಮ್ಯಾನೇಜ್ ಮೆಂಟ್ ರೂಲ್ಸ್ ಅನ್ವಯವಾಗುತ್ತದೆ. ದಿನಕ್ಕೆ 20 ಟನ್ ಗಿಂತ ಹೆಚ್ಚು ಅಥವಾ ತಿಂಗಳಿಗೆ 300 ಟನ್ ಗಳಿಗಿಂತ ಹೆಚ್ಚು ನಿರ್ಮಾಣ ಮತ್ತು ಕೆಡಹುವ ತ್ಯಾಜ್ಯ ಉತ್ಪತ್ತಿ ಮಾಡುವ ಬಿಲ್ಡರ್ ಗಳು ಸ್ಥಳೀಯ ಆಡಳಿತದ ಒಪ್ಪಿಗೆ ಪಡೆದು ಕಾಮಗಾರಿ ನಡೆಸುವುದು ಕಡ್ಡಾಯವಾಗಿದೆ.

 

ಇತ್ತೀಚಿನ ಸುದ್ದಿ

ಜಾಹೀರಾತು