12:10 PM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ನಾಮಕರಣ ಮಾಡಲು ಮನವಿ

November 21, 2020, 3:55 PM

ಮಂಗಳೂರು(reporterkarnataka news):

ಮಂಗಳೂರಿಗೆ ರೈಲಿನಲ್ಲಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಈ ಮಣ್ಣಿಗೆ ಪಾದಾರ್ಪಣೆ  ಮಾಡಿ ಸಾಮಾಜಿಕ ಪರಿವರ್ತನೆಯ ನಾಂದಿ ಹಾಡಿದ ನೆನಪಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಗೆ ಅವರ 
ನಾಮಕರಣ ಮಾಡಲು ಮೇಯರ್ ದಿವಾಕರ ಪಾಂಡೇಶ್ವರ ಅವರಿಗೆ ಪಾಲಿಕೆ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು

ಪಾಲಿಕೆ ಪರಿಷತ್ತಿನ ಮುಂದಿನ ಸಾಮಾನ್ಯ ಸಭೆ ಯಲ್ಲಿ ಗೊತ್ತುವಳಿ ಮಂಡಿಸಿ ನಿರ್ಣಯ ಕೈಗೊಂಡು ಸರಕಾರ ಕ್ಕೆ ಸಲ್ಲಿಸ ಬೇಕೆಂದು ನಿಯೋಗ ಒತ್ತಾಯಿಸಿತು. ಕಾರ್ಪೊರೇಟರ್ ಗಳಾದ ಎಂ. ಶಶಿಧರ ಹೆಗ್ಡೆ, ಲ್ಯಾನ್ಸಿ ಲೋಟ್ ಪಿಂಟೋ, ಎ. ಸಿ. ವಿನಯ ರಾಜ್ , ಅನಿಲ್ ಕುಮಾರ್, ಕೇಶವ ಮರೋಳಿ, ಶಂಶುದ್ಧೀನ್ ಕುದ್ರೋಳಿ, ಭಾಸ್ಕರ್ ಕೆ, ಲತೀಫ್ ಕಂದಕ್, ನವೀನ್ ಡಿಸೋಜ, ಝೀನತ್ ಶಂಶುದ್ಧೀನ್ ಬಂದರ್ , ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್, ಜೆಸಿಂತಾ ಆಲ್ಫ್ರೆಡ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು