ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ನೂತನ ಕಮಿಷನರ್ ಅಕ್ಷಯ್ ಶ್ರೀಧರ್
August 25, 2020, 6:48 AM

ಮಂಗಳೂರು(reporterkarnatakanews): ಮಂಗಳೂರು ಮಹಾನಗರಪಾಲಿಕೆ ನೂತನ ಕಮಿಷನರ್ ಆಗಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ನೇಮಕಗೊಂಡಿದ್ದಾರೆ. ಅವರು ಬುಧವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.
ಪಾಲಿಕೆಯ ಕಮಿಷನರ್ ಆಗಿದ್ದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಅಕ್ಷಯ್ ಶ್ರೀಧರ್ ಅವರನ್ನು ನೇಮಿಸಲಾಗಿದೆ.
ಅಕ್ಷಯ್ ಅವರು ಪ್ರಸ್ತುತ ಬೀದರ್ ನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.