ಇತ್ತೀಚಿನ ಸುದ್ದಿ
ಮಂಗಳೂರು ಜನತೆಯ ನಂಬಿಕೆ ಉಳಿಸುತ್ತೇನೆ: ಪಾಲಿಕೆ ನೂತನ ಕಮಿಷನರ್ ಅಕ್ಷಯ್ ಶ್ರೀಧರ್
August 27, 2020, 4:17 PM

ಅನುಷ್ ಪಂಡಿತ್ ಮಂಗಳೂರು
info. reporterkarnataka@gmail.com
ಮಂಗಳೂರಿನ ಜನತೆ ನನ್ನ ಮೇಲಿಟ್ಟಿರೋ ನಂಬಿಕೆ ಯನ್ನು ಉಳಿಸಿ ಕೊಳ್ಳುತ್ತೇನೆ, ನಾವಿರುವುದು ಜನರ ಸೇವೆಗೆ. ಆ ಕೆಲಸವನ್ನು ಮೊದಲು ಮಾಡುತ್ತೇನೆ.

ಇದು ಮಂಗಳೂರು ಮಹಾನಗರಪಾಲಿಕೆಯ ನೂತನ ಕಮಿಷನರ್ ಅಕ್ಷಯ್ ಶ್ರೀಧರ್ ಅವರ ಸ್ಪಷ್ಟ ನುಡಿ.
ಗುರುವಾರ ಪಾಲಿಕೆಯ ಕಮೀಷನರ್ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದರು.

ಮಂಗಳೂರಿನ ಸಮಸ್ಯೆಗಳು ಯಾವುದು ಎಂಬುದನ್ನು ಮೊದಲು ಅರಿತುಕೊಳ್ಳಲು ಪ್ರಯತ್ನಿಸುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ಜನಸೇವೆಯೇ ಒಬ್ಬ ಅಧಿಕಾರಿಯ ಮೊದಲ ಗುರಿ ಆಗಿರುತ್ತದೆ ಎಂದರು.

ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾದ ಮಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಕ್ರಮ ಕಟ್ಟಡಗಳ ಕುರಿತು ಏನು ಕ್ರಮ ಕೈಗೊಳ್ಖುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಂದಿದ್ದೇನೆ ಅಷ್ಟೇ. ಗ್ರೌಂಡ್ ರಿಪೋರ್ಟ್ ಇನ್ನು ಮಾಡಿಕೊಳ್ಳಬೇಕಷ್ಟೇ ಎಂದರು.