3:41 PM Friday26 - February 2021
ಬ್ರೇಕಿಂಗ್ ನ್ಯೂಸ್
ಪಂಚ ರಾಜ್ಯಗಳ ಚುನಾವಣೆ: ಇಂದು ಸಂಜೆ 4.30ಕ್ಕೆ ಘೋಷಣೆ: ಎಲ್ಲೆಲ್ಲಿ ಎಲೆಕ್ಷನ್ ನಡೆಯಲಿ?… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ

ಇತ್ತೀಚಿನ ಸುದ್ದಿ

ಮಂಗಳೂರು- ಬೆಂಗಳೂರು ರೈಲು ಸಂಚಾರ ಆರಂಭ: ಸ್ಟೇಶನ್ ಟಿಕೆಟ್ ಮಾತ್ರ ಇಲ್ಲ

September 4, 2020, 1:50 PM

ಮಂಗಳೂರು( reporterkarnataka news): ಕರೊನಾ ಕಾರಣದಿಂದ ಮಾರ್ಚ್‌ನಿಂದಲೇ ಮಂಗಳೂರು-  ಬೆಂಗಳೂರು, ಕಾರವಾರ -ಬೆಂಗಳೂರು ಮಧ್ಯೆ ಸಂಚಾರ ನಿಲ್ಲಿಸಿದ್ದ ರೈಲುಗಳು ಮತ್ತೆ ಓಡಲಿವೆ. ಈ ರೈಲುಗಳನ್ನು ಕರೊನಾ ಮಧ್ಯೆ ಈಗ ಪರೀಕ್ಷಾ ವಿಶೇಷ ರೈಲು ಹೆಸರಿನಲ್ಲಿ ಓಡಿಸಲು ರೈಲ್ವೇ ಮುಂದಾಗಿದೆ. ಸೆ.4ರಿಂದಲೇ ಈ ರೈಲುಗಳು ಸಂಚರಿಸಲಿವೆ.

ಸೆ.4ರಿಂದ ಶುರುವಾಗಿ ಮುಂದಿನ ಸೂಚನೆ ವರೆಗೂ ನಂ.06585 ವೈಪಿಆರ್‌-ಕಾರವಾರ ಹಾಗೂ ನಂ.06586 ಕಾರವಾರ-ವೈಪಿಆರ್ ರೈಲು ಸೆ.5ರಿಂದ ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೂ ಅನ್ವಯವಾಗಲಿದೆ. ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲಪುವುದು. ಸೆ.5ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.

ಈ ರೈಲುಗಳಲ್ಲಿ 7 ಸ್ಲೀಪರ್‌, ಒಂದು 3ಟೈರ್‌ ಎಸಿ, ಒಂದು 2 ಟೈರ್‌ ಎಸಿ 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್‌ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ.

ಬೆಂಗಳೂರು-ಮಂಗಳೂರು ರೈಲು  ನಂ.06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆ ವರೆಗೆ ಹಾಗೂ ನಂ.06516 ಮಂಗಳೂರು-ಬೆಂಗಳೂರು ಸಿಟಿ(ವಾರದಲ್ಲಿ ನಾಲ್ಕುದಿನ) ರೈಲು ಸೆ.6ರಿಂದ ಮುಂದಿನ ಸೂಚನೆ ವರೆಗೂ ಸಂಚರಿಸಲಿದೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.

ನಂ.06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆ ವರೆಗೆ ಹಾಗೂ ನಂ.06516 ಮಂಗಳೂರು-ಬೆಂಗಳೂರು ಸಿಟಿ(ವಾರದಲ್ಲಿ ನಾಲ್ಕುದಿನ) ರೈಲು ಸೆ.6ರಿಂದ ಮುಂದಿನ ಸೂಚನೆ ವರೆಗೂ ಸಂಚರಿಸಲಿದೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.

ನಂ.06517 ಬೆಂಗಳೂರು-ಮಂಗಳೂರು(ವಾರದಲ್ಲಿ ಮೂರುದಿನ) ರೈಲು ಸೆ.6ರಿಂದ ಹಾಗೂ ನಂ.06518 ಮಂಗಳೂರು-ಬೆಂಗಳೂರು(ವಾರದಲ್ಲಿ ಮೂರುದಿನ) ಸೆ.5ರಿಂದ ಸಂಚಾರ ಆರಂಭಿಸಲಿದೆ. ಈ ರೈಲುಗಳಿಗೆ ನಂ.16517/16518ರ ನಿಲುಗಡೆಯೇ ಅನ್ವಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು