4:28 AM Saturday23 - January 2021
ಬ್ರೇಕಿಂಗ್ ನ್ಯೂಸ್
ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ… ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ, ಸಿಸಿಬಿ ಪೊಲೀಸರಿಂದ 6 ಮಂದಿಯ ಬಂಧನ ಪ್ರತಿಭಟನೆ ನಿರತ ರೈತರಿಗೆ ಟ್ರ್ಯಾಕ್ಟರ್ Rally ನಡೆಸಲು ದಿಲ್ಲಿ ಪೊಲೀಸರು ಕೊನೆಗೂ ಅನುಮತಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು…

ಇತ್ತೀಚಿನ ಸುದ್ದಿ

ಮಂಗಳೂರಿನ ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ನಿಂದ ಬಡ ಬಾಲಕಿಯ ಚಿಕಿತ್ಸೆಗೆ 4.15 ಲಕ್ಷ ರೂ. ನೆರವು

December 11, 2020, 9:24 PM

ಮಂಗಳೂರು(reporterkarnataka news): ಅದು ಮೊನ್ನೆ ಮೊನ್ನೆ ಜನ್ಮತಾಳಿದ ಟ್ರಸ್ಟ್. ಅಶಕ್ತ ಕುಟುಂಬಗಳ ಅನಾರೋಗ್ಯಪೀಡಿತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಬರೇ 4 ತಿಂಗಳ ಹಿಂದೆ ಜನ್ಮ ತಾಳಿದ ಟ್ರಸ್ಟ್. ಹೆಸರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್. ಹೆಸರಿಗೆ ತಕ್ಕಂತೆ ಟ್ರಸ್ಟ್ ಅನಾರೋಗ್ಯ ಪೀಡಿತ ಪುಟ್ಟ ಹೆಣ್ಣುಮಗುವಿನ ಆಸ್ಪತ್ರೆ ಬಿಲ್ ಹಾಗೂ ಇತರ ಖರ್ಚಿಗೆ 4.15 ಲಕ್ಷ ರೂ. ಉದಾರ ಕೊಡುಗೆ ನೀಡಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬ ಸಂದೇಶವನ್ನು ಸಮಾಜಕ್ಕೆ ಮತ್ತೊಮ್ಮೆ ನೀಡಿದೆ.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ರೂವಾರಿ ಅರ್ಜುನ್ ಭಂಡಾರ್ ಕಾರ್ ಅವರು. ಮಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅರ್ಜುನ್ ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಭಾಗ್ಯಶ್ರೀ ಭಂಡಾರ್ ಕಾರ್ ಮತ್ತು ಗೆಳೆಯ ಸಂಜಯ್ ಭಟ್. ಅರ್ಜುನ್ ಭಂಡಾರ್ ಕಾರ್ ಅವರು ಟ್ರಸ್ಟಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಇಬ್ಬರು ಟ್ರಸ್ಟಿಗಳಾಗಿ ಕಾರ್ಯ ಭಾರ ಮಾಡುತ್ತಿದ್ದಾರೆ.

ಟ್ರಸ್ಟ್ ಅಸ್ತಿತ್ವಕ್ಕೆ ಬಂದು ಕೇವಲ 4 ತಿಂಗಳಿನಲ್ಲಿ 82 ಬಡ ಕುಟುಂಬಗಳಿಗೆ 45 ಲಕ್ಷ ರೂ. ವೈದ್ಯಕೀಯ ನೆರವು ನೀಡಿದೆ. ಇದಷ್ಟೆ ಅಲ್ಲದೆ ಟ್ರಸ್ಟ್ ರಚನೆಯಾಗುವ ಮುನ್ನವೇ ಸುಮಾರು 100 ಕುಟುಂಬಗಳಿಗೆ 80 ಲಕ್ಷ ರೂ. ವೈದ್ಯಕೀಯ ನೆರವು ಕಲ್ಪಿಸಿದೆ. ಇದುವರೆಗೆ 1.25 ಕೋಟಿ ರೂ. ವೈದ್ಯಕೀಯ ನೆರವು ಸದ್ದಿಲ್ಲದೆ ನೀಡಿದೆ. ಇದೀಗ ಚಿತ್ರದುರ್ಗದ ಕೋಮಲ ಎಂಬ ಬಾಲಕಿಯ ಚಿಕಿತ್ಸೆಗೆ ಒಟ್ಟು 4.15 ಲಕ್ಷ ರೂ. ನೆರವು ನೀಡಿದೆ. ಇದರಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಬಿಲ್ 3.70 ಲಕ್ಷ ರೂ. ಹಾಗೂ ಇತರ ಖರ್ಚಿಗೆ 45 ಸಾವಿರ ರೂ. ಸೇರಿದೆ.

ಇತ್ತೀಚಿನ ಸುದ್ದಿ

ಜಾಹೀರಾತು