ಇತ್ತೀಚಿನ ಸುದ್ದಿ
ಮಂಗಳೂರಿಗೆ ಬರುತ್ತಿದ್ದ ಬಿಯರ್ ಲಾರಿ ಪಲ್ಟಿ; ಬಾಟ್ಲಿಗಾಗಿ ಮುಗಿದ ಬಿದ್ದ ಸ್ಥಳೀಯರು, ಪೊಲೀಸರಿಂದ ನಿಯಂತ್ರಣ
January 18, 2021, 1:12 PM

ಸುಳ್ಯ(reporterkarnataka news):
ಮೈಸೂರಿನಿಂದ ಮಂಗಳೂರಿಗೆ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಸುಳ್ಯ ಅರಂತೋಡು ಸಮೀಪದ ಕೊಡಂಕೇರಿಯಲ್ಲಿ ಮಗುಚಿ ಬಿದ್ದು ಸುಮಾರು 45 ಲಕ್ಷ ರೂ. ನಷ್ಟ ಉಂಟಾಗಿದೆ. ಬಿಯರ್ ಗಾಗಿ ಸ್ಥಳೀಯರು ಮುಗಿ ಬಿದ್ದಿದ್ದಾರೆ.
ಮಡಿಕೇರಿ ಕಡೆಯಿಂದ ಕಿರಿದಾದ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಿದ ಲಾರಿ ಅಗಲವಾದ ರಸ್ತೆ ಸಿಗುತ್ತಿದ್ದಂತೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಲಾರಿ ಅಪಘಾತಕ್ಕೆ ಈಡಾದ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಬಿಯರ್ ಗಾಗಿ ಮುಗಿ ಬಿದ್ದಿದ್ದು, ತಕ್ಷಣವೇ ಪೋಲಿಸರು ಮತ್ತು ಅಬಕಾರಿ ಇಲಾಖೆ ಸ್ಥಳಕ್ಕೆ ಆಗಮಿಸಿದ್ದಾರೆ.