6:06 AM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4 ಮಂದಿ ಸಿಸಿಬಿ ಬಲೆಗೆ

January 18, 2021, 1:01 PM

ಮಂಗಳೂರು(reporterkarnataka news): ಕರಾವಳಿಯಲ್ಲಿ ಹನಿಟ್ರ್ಯಾಪ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಟಾರ್ಗೆಟ್ ಗ್ಯಾಂಗ್ ನ ಬಂಧನವಾದ ಬಳಿಕ ತಣ್ಣಗಾಗಿದ್ದ ಹನಿಟ್ರ್ಯಾಪ್ ಗೆ ಇದೀಗ ನೆರೆಯ ಕುಂಬಳೆಯ ಯುವಕನೊಬ್ಬ ಸಿಲುಕಿದ್ದು, ಈ ಜಾಲದಿಂದ ಹೊರಬರಲಾಗದೆ ಕೊನೆಗೂ ಪೊಲೀಸ್ ಮೊರೆ ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷವೆಂದರೆ ಬಂಧಿತ ಯುವತಿಯರು ಹೊರ ರಾಜ್ಯ, ಹೊರ ಜಿಲ್ಲೆಯವರಲ್ಲ. ಬದಲಿಗೆ ನಮ್ಮ ನೆರೆಯ ಕಾಟಿಪಳ್ಳ ಕೃಷ್ಣಾಪುರದವರು. ಇದು ಹನಿಟ್ರ್ಯಾಪ್ ನ ಹೊಸ ಗ್ಯಾಂಗ್

ಏನಿದು ಪ್ರಕರಣ?: ಕುಂಬಳೆ ನಿವಾಸಿ ಯುವಕನೊಬ್ಬನಿಗೆ ಫೇಸ್ಬುಕ್ ನಲ್ಲಿ ಕೃಷ್ಣಾಪುರದ ಇಬ್ಬರು ಮಹಿಳೆಯರು ಪರಿಚಯವಾಗಿದ್ದರು. ಕೆಲವು ದಿನಗಳ ಕಾಲ ಮೆಸೆಂಜರ್ ನಲ್ಲಿ ಯುವಕನ ಜತೆ ಚಾಟ್ ಮಾಡುತ್ತಿದ್ದರು. ಯುವಕನ ವಿಶ್ವಾಸ ಗಳಿಸುತ್ತಿದ್ದಂತೆ ಮೊಬೈಲ್ ನಂಬರ್ ವಿನಿಮಯವಾಯಿತು. ಫೋನ್ ನಂಬರ್ ಸಿಕ್ಕಿದ್ದೇ ತಡ ಯುವತಿಯರು ಕೃಷ್ಣಾಪುರಕ್ಕೆ ಬರುವಂತೆ ಯುವಕನಿಗೆ ಆಹ್ವಾನಿಸಿಯೇ ಬಿಟ್ಟರು. ಲಡ್ಡು ಬಾಯಿಗೆ ಬಿತ್ತು ಎಂದು ಯುವಕ ಕೂಡ ಖುಷಿಗೊಂಡ. ಕೃಷ್ಣಾಪುರಕ್ಕೆ ಹೊರಟೇ ಬಿಟ್ಟ. ಯುವತಿಯರು ಸಿಕ್ಕಿದರು. ಜತೆಗೆ ಇಬ್ಬರು ಯುವಕರು ಸಿಕ್ಕಿದರು. ಕುಂಬಳೆ ಯುವಕನನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಸಂಪೂರ್ಣ ಬಟ್ಟೆ ಬಿಚ್ಚಿ ಫೋಟೋ ತೆಗೆದು 5 ಲಕ್ಷ ಹಣ ಕೊಡಬೇಕು ಇಲ್ಲದಿದ್ದರೆ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದರು. ಮರ್ಯಾದೆಗೆ ಅಂಜಿದ ಯುವಕ ಕಾರನ್ನು ಅಡವಿಟ್ಟು ಹಣ ಕೊಡುವುದಾಗಿ ಹೇಳಿ ಮನೆಗೆ ಬಂದ. ಆದರೆ ಹನಿಟ್ರ್ಯಾಪ್ ಗ್ಯಾಂಗ್ ನವರು ಸುಮ್ಮನಾಗಲಿಲ್ಲ, ಹಣಕ್ಕಾಗಿ ಪೀಡಿಸಲಾರಂಭಿಸಿದರು. ಕೊನೆಗೂ ಬೇಸತ್ತ ಯುವಕ ಪೊಲೀಸರಿಗೆ ದೂರು ನೀಡಿದ. ಇದೀಗ ಸಿಸಿಬಿ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು