ಇತ್ತೀಚಿನ ಸುದ್ದಿ
ಮಂಗಳೂರು ವಿಮಾನ ನಿಲ್ದಾಣ: ಡಿಸೆಂಬರ್ 15ರಿಂದ ಗೋ ಏರ್ ವಿಮಾನ ಸೇವೆ ಆರಂಭ?
December 8, 2020, 9:28 AM

ಮಂಗಳೂರು(reporterkarnataka news):
ಗೋ ಏರ್ ವಿಮಾನ ಸೇವೆ ಡಿಸೆಂಬರ್ 15ರಿಂದ ಮಂಗಳೂರು- ಅಹಮದಾಬಾದ್, ಮಂಗಳೂರು -ಮುಂಬೈ ಹಾಗೂ ಮಂಗಳೂರು -ಬೆಂಗಳೂರು ಮಧ್ಯೆ ಆರಂಭವಾಗುವ ನಿರೀಕ್ಷೆಯಿದೆ.
ಡಿಸೆಂಬರ್ 11ರಿಂದ ಮಂಗಳೂರು -ಮೈಸೂರು ಮಧ್ಯೆ ಏರ್ ಇಂಡಿಯಾ ಅಲಯನ್ಸ್ ಏರ್ ವಿಮಾನಯಾನ ಆರಂಭವಾಗಲಿದೆ. ಮೈಸೂರಿನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಂಗಳೂರಿಗೆ 12.20ಕ್ಕೆ ತಲುಪಲಿದೆ.
ಮಂಗಳೂರಿನಿಂದ 12.50ಕ್ಕೆ ಹೊರಟು 13.50ಕ್ಕೆ ಮೈಸೂರು ತಲುಪಲಿದೆ. ಬುಧವಾರ ,ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಸೇವೆ ಇರಲಿದೆ.