ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ
December 3, 2020, 12:35 PM

ಮಂಗಳೂರು( reporterkarnataka news):
ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ವಿದಾತ್ಮಕ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಶೀಘ್ರದಲ್ಲೇ ಇನ್ನಿಬ್ಬರ ಬಂಧನ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದಾನೆ. ಈತ ನಗರದಲ್ಲಿ ಆನ್ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ. ಹೆಸರು ನಜೀರ್ ಮಹಮ್ಮದ್ ಆಗಾ
ಎಂದು ತಿಳಿದು ಬಂದಿದೆ.
ನಗರದ ಬಿಜೈ ಮತ್ತು ಕೋರ್ಟ್ ಸಮೀಪ ಕೆಲದಿನಗಳ ಹಿಂದೆ ಕಂಡು ಬಂದ ಉಗ್ರ ಬರಹ ಕಂಡು ಬಂದಿತ್ತು. ಆರೋಪಿಯನ್ನು ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.