ಇತ್ತೀಚಿನ ಸುದ್ದಿ
ಮಂಗಳೂರಿಂದ ಮೈಸೂರಿಗೆ ಹಾರಲಿದೆ ಏರ್ ಇಂಡಿಯಾ : ಅಕ್ಟೋಬರ್ 25ರಿಂದ ಸೇವೆ ಆರಂಭ
October 16, 2020, 12:58 PM

ಮಂಗಳೂರು(reporterkarnataka news):
ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಅಕ್ಟೋಬರ್ 25ರಿಂದ ಸೇವೆ ಆರಂಭವಾಗಲಿದೆ.
ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈಗ ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಸಂಸದ ಪ್ರತಾಪ್ ಸಿಂಹ ಮತ್ತು ಕೆಲವು ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿದ್ದರು.
ಏರ್ ಇಂಡಿಯಾ
ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ 6.50 ಕ್ಕೆ ಬರುವ ಏರ್ ಇಂಡಿಯಾ ವಿಮಾನವನ್ನೇ ಮೈಸೂರಿಗೆ ಹಾರಾಟ ನಡೆಸಲು ಸೂಚಿಸಲಾಗಿದೆ.
ಈ ವಿಮಾನ ಬೆಳಿಗ್ಗೆ 7.55 ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50 ಕ್ಕೆ ಮಂಗಳೂರು ತಲುಪಲಿದೆ.