9:43 AM Thursday3 - December 2020
ಬ್ರೇಕಿಂಗ್ ನ್ಯೂಸ್
ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ  ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ ಬುಕ್… ಮಂಗಳೂರು ಏರ್ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರಿಡುವಂತೆ ಆಗ್ರಹಿಸಿ ಡಿ.7ರಂದು ಬೈಕ್ ಜಾಥಾ ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ನಾಳೆ ಬಸ್ ಸಂಚಾರ ಇದೆಯೇ? ಅಂಗಡಿಗಳು ತೆರೆದಿರುತ್ತದೆಯೇ?

September 27, 2020, 4:41 PM

ಮಂಗಳೂರು(reporterkarnataka news): ಭೂ ಸುಧಾರಣೆ ಕಾಯಿದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯಿದೆ ವಿರೋಧಿಸಿ ಸೆ.28ರಂದು ನಡೆಯಲಿರುವ ದೇಶವ್ಯಾಪಿ ಬಂದ್‌ಗೆ ದಕ್ಷಿಣ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆ ಮಾತ್ರ ನಡೆಯಲಿದೆ.

ಜಿಲ್ಲೆಯಲ್ಲಿ ಸೋಮವಾರ ಎಂದಿನಂತೆ ಸರಕಾರಿ ಹಾಗೂ ಖಾಸಗಿ ಬಸ್ ಗಳ ಓಡಾಟ ನಡೆಯಲಿದೆ.

ರೈತ ಪರ ಸಂಘಟನೆಗಳು ಮತ್ತು ಬಿಜೆಪಿಯೇತರ ರಾಜಕೀಯ ಪಕ್ಷಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ರಸ್ತೆ ತಡೆ, ಪ್ರತಿಭಟನೆಗಷ್ಟೇ ಕರಾವಳಿಯಲ್ಲಿ ಬಂದ್ ಸೀಮಿತವಾಗಲಿದೆ. 

ಮಂಗಳೂರಿನ ಮಿನಿ ವಿಧಾನಸೌಧ ಎದುರು

ಕಾಂಗ್ರೆಸ್, ಕಮ್ಯುನಿಸ್ಟ್, ಜನತಾದಳ ಹಾಗೂ ಇತರ ಪಕ್ಷಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಲಿದೆ. ಮೂಡುಬಿದರೆ ಬಸ್ ನಿಲ್ದಾಣದ ಬಳಿ ಬೆಳಗ್ಗೆ 10 ಗಂಟೆಗೆ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.

ಬಂಟ್ವಾಳ ಮತ್ತು ಸುಳ್ಯದಲ್ಲಿ ರೈತ ಹಾಗೂ ಕಾರ್ಮಿಕರ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹಸುರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್‌ ಪುಣಚ ತಿಳಿಸಿದ್ದಾರೆ.

ಸೆ.28ರಂದು ದಕ್ಷಿಣ ಕನ್ನಡದಲ್ಲಿ ಬಸ್‌ ಸಂಚಾರ ಎಂದಿನಂತೆ ಇರಲಿದೆ. ಬಸ್ ನಿಲ್ಲಿಸುವ ಬಗ್ಗೆ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಮೂಲಗಳು ತಿಳಿಸಿವೆ. ಹಾಗೆ ಖಾಸಗಿ ಬಸ್‌ ಗಳ ಸಂಚಾರವೂ ಎಂದಿನಂತೆ ಇರಲಿದೆ ಎಂದು ಉಡುಪಿ ಮತ್ತು ದ.ಕ. ಬಸ್‌ ಮಾಲೀಕರ ಸಂಘ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು