ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಸಂಭ್ರಮದ ಬಾಲ ಯೇಸುವಿನ ಹಬ್ಬ: ಮೊದಲ ದಿನ 25 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳ ಆಗಮನ
January 14, 2021, 10:30 PM

ಮಂಗಳೂರು( reporterkarnataka news): ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಮೊದಲನೆಯ ದಿನದ ಪೂಜೆ ಆಚರಣೆಗಳು ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸರಿ ಸುಮಾರು 25 ಸಾವಿರ ಜನರು ವಾರ್ಷಿಕ ಹಬ್ಬದ ಪ್ರಯುಕ್ತ, ಪುಣ್ಯಕ್ಷೇತ್ರಕ್ಕೆ ಆಗಮಿಸಿದರು.ಬೆಳಗ್ಗೆ ವಂ. ಗುರು ಪ್ರಕಾಶ್ ಡಿಕುನ್ಹ, ವಂ. ಗುರು ವಾಲ್ಟರ್ ಡಿ’ಸೋಜಾ, ವಂ. ಗುರು ರೊನಾಲ್ಡ್ ಸೆರಾವೊ, ರೆಕ್ಟರ್, ವಂ. ಗುರು ಅಲ್ಪೋನ್ಸ್ ಬ್ರಿಟ್ಟೊ, ಅತೀ ವಂ. ಡಾ. ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ, ಧರ್ಮಕ್ಷೇತ್ರದ ಮೇಷಪಾಲಕರು ಸಾಂಭ್ರಮಿಕ ಪೂಜೆಯನ್ನು ಅರ್ಪಿಸಿದರು.
dium wp-image-13321″ />
ನಾವೆಲ್ಲರು ಸಹೋದರ-ಸಹೋದರಿಯರು, ಒಗ್ಗಟ್ಟಿನಿಂದ ಇರುವುದು ನಮ್ಮ ಒಳಿತು. ಸಂತೋಷ-ಸಾಮರಸ್ಯದಲ್ಲಿ ಇರಬೇಕಾದರೆ ಪ್ರೀತಿ ಅಗತ್ಯ. ಎಲ್ಲರನ್ನು ಪ್ರೀತಿಯ ದೃಷ್ಟಿಯಲ್ಲಿ ನೋಡಿದರೆ ಮಾತ್ರ ಸಂತೋಷದಲ್ಲಿ ಇರಬಹುದು ಎಂದು ಧರ್ಮಾಧ್ಯಕ್ಷರು ಉಪದೇಶಿಸಿದರು.
ಕರ್ಮೆಲ್ ಸಭೆಯ ಪ್ರಾಂತ್ಯಾಧಿಕಾರಿಗಳಾದ ವಂ. ಗುರು ಪಾಯಸ್ ಜೇಮ್ಸ್ ಡಿ’ಸೋಜ, ವಂ. ಗುರು ಚಾರ್ಲ್್ಸ ಸೆರಾವೊ, ವಂ. ಗುರು ಲ್ಯಾನ್ಸಿ ಲೆವಿಸ್, ವಂ. ಗುರು ಬರ್ನಬಸ್ ಮೊನಿಸ್ ಹಾಗೂ ವಂ. ಗುರು ರೋವೆಲ್ ಡಿ’ಸೊಜ ರವರು ಸಹಯಾಜಕರಾಗಿ ಉಪಸ್ಥಿತರಾಗಿದ್ದರು.
ಕೋವಿಡ್-೧೯ ಎಲ್ಲಾ ನಿಯಮಗಳನ್ನು ಪಾಲಿಸಲಾಯಿತು.