ಇತ್ತೀಚಿನ ಸುದ್ದಿ
ಮಂಗಳೂರು ಮೈಸೂರು ನಡುವೆ ವಿಮಾನ ಸೇವೆ ಆರಂಭ
December 12, 2020, 7:41 AM

ಮಂಗಳೂರು(reporterkarnataka news):ಅಲೈಯನ್ಸ್ ಏರ್ ಸಂಸ್ಥೆಯು ಮೈಸೂರು – ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ (ವಾರಕ್ಕೆ 4 ದಿನ) ವಿಮಾನ ಹಾರಾಟ ನಡೆಸಲಿದೆ. 9I 532 ನಂಬರ್ ವಿಮಾನ ಮೈಸೂರಿನಿಂದ ಬೆಳಗ್ಗೆ 11.20 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.30 ಕ್ಕೆ ಮಂಗಳೂರು ತಲುಪಲಿದೆ. ಇನ್ನೊಂದೆಡೆ, 9I 533 ನಂಬರ್ ವಿಮಾನ ಮಧ್ಯಾಹ್ನ 12.55 ಕ್ಕೆ ಮಂಗಳೂರಿನಿಂದ ಹೊರಡಲಿದ್ದು, ಮಧ್ಯಾಹ್ನ 1.55 ಕ್ಕೆ ಮೈಸೂರು ತಲುಪಲಿದೆ ಎಂದು ಅಲೈಯನ್ಸ್ ಏರ್ ಸಂಸ್ಥೆ ಮಾಹಿತಿ ನೀಡಿದೆ.