ಇತ್ತೀಚಿನ ಸುದ್ದಿ
ಮಂಗಳೂರು ಗೋಲಿಬಾರ್ ಗೆ ಒಂದು ವರ್ಷ: ಹೈ ಅಲರ್ಟ್
December 19, 2020, 9:34 AM

ಮಂಗಳೂರು(reporterkarnataka news): ಪೌರತ್ವ ಕಾನೂನು ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ಗೆ ಇಂದು ಒಂದು ವರ್ಷ.
ಮಂಗಳೂರು ನಗರದ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದ ಗಲಭೆ ಅಂದು ಸಂಭವಿಸಿತ್ತು. ಪೊಲೀಸರ ಜತೆ ನೇರ ಸಂಘರ್ಷಕ್ಕೆ ಇಳಿದಿದ್ದರು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಪ್ರಾಣ ಹಾನಿ ಕೂಡ ಸಂಭವಿಸಿತ್ತು.
ಪೊಲೀಸ್ ಗೋಲಿಬಾರ್ ಗೆ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗರಿಷ್ಟ ಮುನ್ನೆಚ್ಚರಿಕೆ ವಹಿಸಲಾಗಿದೆ.