8:19 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಮಂಗಳೂರು ಬೀಚ್ ಗೆ ಪೊಲೀಸ್ ದಾಳಿ: ಅಮಲು ಪದಾರ್ಥ ಸೇವಿಸುತ್ತಿದ್ದ 70ಕ್ಕೂ ಅಧಿಕ ಮಂದಿ ವಶಕ್ಕೆ

January 9, 2021, 9:51 AM

ಮಂಗಳೂರು(reporterkarnataka news): ಮಂಗಳೂರು ಬೀಚ್ ಗಳಿಗೆ ದಾಳಿ ಮುಂದುವರಿಸಿದ ಪೊಲೀಸರು ಅಮಲು ಪದಾರ್ಥ ಸೇವಿಸುತ್ತಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಸೂಚನೆಯಂತೆ ನಿನ್ನೆ ಪೊಲೀಸರು ಹಠಾತ್ತನೇ ನಗರದ ಬೀಚ್​ಗಳಲ್ಲಿ ದಾಳಿ ಮಾಡಿ ಅಮಲು ಪದಾರ್ಥ ಸೇವಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರಿನ ಪಣಂಬೂರು, ಸೋಮೇಶ್ವರ, ತಣ್ಣೀರುಬಾವಿ ಮತ್ತು ಸುರತ್ಕಲ್ ಬೀಚ್​ಗಳಿಗೆ ರಾತ್ರಿ ವೇಳೆ ಏಕಕಾಲದಲ್ಲಿ ದಾಳಿ ಮಾಡಿದ ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ 70 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ, ಕತ್ತಲಾದರೂ ಬೀಚ್​ಗಳಲ್ಲಿ ಅನಗತ್ಯ ತಿರುಗಾಡುವವರನ್ನು ವಿಚಾರಣೆ ನಡೆಸಲಾಯಿತು. ಈ ವೇಳೆ ಹಲವರಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದೆ. ಸುಮಾರು 65 ಮಂದಿ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ ಬೀಚ್​ನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರ 17 ಬೈಕ್ ಮತ್ತು 7 ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ 12 ಬೈಕ್ ಮತ್ತು 2 ಕಾರುಗಳಲ್ಲಿ ಹಳೆ ಪ್ರಕರಣಗಳು ಬಾಕಿಯಿದೆ. ಹತ್ತಕ್ಕಿಂತ ಹೆಚ್ಚು ಬೈಕ್​ಗಳಿಗೆ 10 ಕ್ಕಿಂತ ಹೆಚ್ಚಿನ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಬೀಚಿನಲ್ಲಿ ಪೊಲೀಸ್ ದಾಳಿ ಬೀಚ್​ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಆಧಾರದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಮಾರ್ಗದರ್ಶನದಲ್ಲಿ ಡಿಸಿಪಿ, ಎಸಿಸಿಗಳ ಮೇಲ್ವಿಚಾರಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್​ಗಳು ತಲಾ 20 ಪೊಲೀಸ್ ಸಿಬ್ಬಂದಿಗಳ‌ ತಂಡ ರಚಿಸಿ ಈ ದಾಳಿ ನಡೆಸಲಾಗಿತ್ತು. ವಶಕ್ಕೆ ತೆಗೆದುಕೊಂಡವರನ್ನು ಮಂಗಳೂರಿನ ಪುರಭವನದ ಸಭಾಂಗಣದಲ್ಲಿ ಕೂರಿಸಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಎಚ್ಚರಿಕೆ ನೀಡಿದರು.

ದಾಳಿಯ ವೇಳೆಯಲ್ಲಿ ಒಂದು ಗಾಂಜಾ ಪ್ರಕರಣ ಪತ್ತೆಯಾಗಿದೆ. ಗಾಂಜಾಕ್ಕೆ ಚಾಕಲೇಟ್ ಮಿಶ್ರಣ ಮಾಡಿ ಟ್ಯಾಬ್ಲೆಟ್ ರೀತಿ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣ ಪತ್ತೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು