ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ವೇಶ್ಯಾವಟಿಕೆ: ಇಬ್ಬರು ಯುವತಿಯರ ರಕ್ಷಣೆ, ಬೃಹತ್ ಜಾಲದ ಶಂಕೆ
October 4, 2020, 9:19 AM

ಮಂಗಳೂರು(reporterkarnataka news): ನಗರದ ವೆಲೆನ್ಸಿಯಾದ ಪ್ಲ್ಯಾಟ್ ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೂವರು ಪುರುಷರನ್ನು ಬಂಧಿಸಲಾಗಿದೆ. ಇದರಲ್ಲಿ ಪ್ಲ್ಯಾಟ್ ಮಾಲಿಕ ಕೂಡ ಸೇರಿದ್ದಾನೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಈ ಯುವತಿಯರು ಬೆಂಗಳೂರು ಮೂಲದವರಾಗಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇದರ ಹಿಂದೆ ಬೃಹತ್ ಜಾಲ ಇರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ