10:06 AM Wednesday27 - January 2021
ಬ್ರೇಕಿಂಗ್ ನ್ಯೂಸ್
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ…

ಇತ್ತೀಚಿನ ಸುದ್ದಿ

ಮಾನವೀಯತೆಗೆ ಮಿಡಿದ ಕಂಡಕ್ಟರ್ ಹೃದಯ : ಆಸ್ಪತ್ರೆಗೆ ಅಲೆದಾಡಿದರು ಪ್ರಯಾಣಿಕನ ಜೀವ ಉಳಿಯಲಿಲ್ಲ..!!

November 29, 2020, 9:52 PM

ಮಂಗಳೂರು(Reporter Karnataka News)

ಬಸ್ಸಿನ್ನಲ್ಲಿ ಪಯಣಿಸುತ್ತಿರುವಾಗ ದಿಢೀರ್ ಕುಸಿದು ಬಿದ್ದ ಹೊರರಾಜ್ಯದ ಕಾರ್ಮಿಕನೋರ್ವನ ಜೀವ ಉಳಿಸಲು ಕಂಡಕ್ಟರ್ ತನ್ನ ಕೆಲಸ ಬಿಟ್ಟು ಮಂಗಳೂರಿನ ಆಸ್ಪತ್ರೆಗಳನ್ನು ಸುತ್ತಿ ಮಾನವೀಯತೆ ಮೆರೆದ ಪ್ರಸಂಗ ಇತ್ತೀಚೆಗೆ ನಡೆದಿದೆ.

ಕಂಡಕ್ಟರ್ ಗಣೇಶ್ ಅವರು ನ.16 ರಂದು ಬೆಳಗ್ಗೆ ಎಂದಿನಂತೆ ಬಜಪೆ ಕೈಕಂಬ ಮಾರ್ಗದಲ್ಲಿ ಸಂಚರಿಸುವ ಶಾನ್ ಸರ್ವಿಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರಪ್ರದೇಶ ವಾರಣಾಸಿ ಮೂಲದ ರಾಜೇಶ್ ಚೌಹಾಣ್ (40) ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ದಿಢೀರ್ ಅಸ್ವಸ್ಥತಗೊಂಡು ಕುಸಿದರು. ಆ ಸಂದರ್ಭ ಗಣೇಶ್ ಅವರು ಟಿಕೇಟ್ ಕಲೆಕ್ಷನ್ ಕೆಲಸ ರಮೇಶ್ ಅವರಿಗೆ ವಹಿಸಿ ಆತನನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಆದರೆ ಆರೋಗ್ಯ ಸ್ಥಿತಿ ಕೈ ಮೀರಿ ಹೋಗಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು.
ತಕ್ಷಣ ಸ್ಥಳೀಯ ಸೇವಾ ಸಂಘದ ಆಂಬುಲೆನ್ಸ್‌ನಲ್ಲಿ ವೆನ್‌ಲಾಕ್ ಗೆ ಕರೆ ತಂದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಚೌಹಾನ್ ಮೃತಪಟ್ಟರು.

ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಗಣೇಶ್ ಮಾಹಿತಿ ನೀಡಿ ದೂರು ದಾಖಲಿಸಿದ್ದರು.

ನಡು ದಾರಿಯಲ್ಲಿ ವಿಲವಿಲ ಒದ್ದಾಡುವಾಗಲು ಕೋರ್ಟು ಕಚೇರಿಯ ನೆಪ ಹೇಳಿ ಜೀವ ಉಳಿಸಲು ಹಿಂದೆ ಮುಂದೆ ನೋಡುವ ಜನರ ನಡುವೆ ಹೊರ ರಾಜ್ಯದ ಕಾರ್ಮಿಕನೋರ್ವನ ಜೀವ ಉಳಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ ಎಂದು ಸುರತ್ಕಲ್ ಪೊಲೀಸ್ ಸಿ.ಐ.ಚಂದ್ರಪ್ಪ ಹಾಗೂ ಇಲಾಖೆಯ ಅಧಿಕಾರಿಗಳು, ಸಿಬಂಧಿಗಳು ಗಣೇಶ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು