ಇತ್ತೀಚಿನ ಸುದ್ದಿ
ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮುವಿಗೆ ಈ ಕಷಾಯ ಕುಡಿದು ನೋಡಿ: ರೋಗ ನಿರೋಧಕ ಶಕ್ತಿ ಬರುತ್ತೆ !
August 14, 2020, 3:04 AM

ಪವಿತ್ರಾ ಯೆಡ್ತಾಡಿ
ಮಳೆಗಾಲ ಬಂತೆಂದರೆ ಸಾಕು ಶೀತ, ಕೆಮ್ಮು ಎಲ್ಲರನ್ನೂ ಬಿಡದೇ ಕಾಡುವ ಸಮಸ್ಯೆ. ಅದರಲ್ಲೂ ಈಗ ಎಲ್ಲೆಡೆ ಕೊರೊನಾದ್ದೇ ಅಟ್ಟಹಾಸ. ಆಸ್ಪತ್ರೆಗೆ ಹೋಗುವುದಕ್ಕೂ ಭಯ. ಹಾಗಾಗಿ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಕಷಾಯ ಮಾಡಿಕೊಂಡು ಸವಿದರೆ ರೋಗನಿರೋಧಕ ಶಕ್ತಿ ಕೂಡ ಹಚ್ಚುತ್ತದೆ. ಟೀ, ಕಾಫಿ ಬದಲಿಗೆ ಇದನ್ನು ಸೇವಿಸಬಹುದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದು. ಮಾಡುವ ವಿಧಾನ ಕೂಡ ಸುಲಭವಿದೆ.
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಮೆಂತೆಕಾಳು 2 ಟೇಬಲ್ ಸ್ಪೂನ್, ಜೀರಿಗೆ 3 ಟೇಬಲ್ ಸ್ಪೂನ್, ಕಾಳುಮೆಣಸು 1 ಟೀ ಸ್ಪೂನ್, 4 ಲವಂಗ, 1 ಚಿಕ್ಕ ತುಂಡು ಚಕ್ಕೆ,ಏಲಕ್ಕಿ 2 ಹಾಕಿ ಎಣ್ಣೆ ಸೇರಿಸದೇ ಹುರಿದುಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿಕೊಳ್ಳಿ. ಇದಕ್ಕೆ 1 ಟೀ ಸ್ಪೂನ್ ಶುಂಠಿ ಪುಡಿ ಸೇರಿಸಿ ಪುಡಿಮಾಡಿಕೊಂಡು ಗಾಜಿನ ಬಾಟಲಿಯೊಳಗೆ ತುಂಬಿಸಿಕೊಳ್ಳಿ. ಇನ್ನು ಕಷಾಯ ಮಾಡುವಾಗ 1 ಗ್ಲಾಸ್ ನೀರಿಗೆ ½ ಚಮಚದಷ್ಟು ಇದನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ½ ಗ್ಲಾಸ್ ಹಾಲು ಸೇರಿಸಿ ಮತ್ತೊಮ್ಮೆ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿಕೊಂಡು ಇದನ್ನು ಸೋಸಿಕೊಳ್ಳಿ. ಇದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಿರಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.