ಇತ್ತೀಚಿನ ಸುದ್ದಿ
ಮಕ್ಕಳನ್ನು ಗದರಿಸಬೇಡಿ: ಹೆತ್ತವರಿಗೆ ಸಚಿವ ಸುರೇಶ್ ಕುಮಾರ್ ಮನವಿ
August 10, 2020, 10:13 AM

ಬೆಂಗಳೂರು(reporterkarnataka news):ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾಲಕರಿಗೆ ಬುದ್ದಿ ಮಾತು ಹೇಳಿದ್ದಾರೆ.
ತಮ್ಮ ನಿರೀಕ್ಷಗೆ ತಕ್ಕಂತೆ ಮಕ್ಕಳು ಸಾಧನೆ ಪ್ರದರ್ಶಿಸದಿದ್ದರೆ ಅವರನ್ನು ಗದರಿಸಬೇಡಿ.. ಅವರ ಜತೆ ಸಮಾಧಾನದಿಂದ ಮಾತನಾಡಿ. ಎಂದು ಸಲಹೆ ನೀಡಿದ್ದಾರೆ.
ಇನ್ನೊಂದು ವಿದ್ಯಾರ್ಥಿಯ ಜತೆ ತಮ್ಮ ಮಕ್ಕಳ ಫಲಿತಾಂಶವನ್ನು ಹೋಲಿಕೆ ಮಾಡಬೇಡಿ. ಕೊರೋನಾ ಸಮಯದಲ್ಲಿ ಪರೀಕ್ಷೆ ಬರೆದ್ದದ್ದೇ ದೊಡ್ಡ ಸಾಧನೆ ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ