ಇತ್ತೀಚಿನ ಸುದ್ದಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಸೋಂಕು
August 10, 2020, 9:09 AM

ನವದೆಹಲಿ(reporterkarnatakanews): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸ್ವತ: ಪ್ರಣಬ್ ಮುಖರ್ಜಿ ಅವರೇ ಇದನ್ನು ಸಾಮಾಜಿಕ ಜಾಲ ತಾಣದ ಮೂಲಕ ಬಹಿರಂಗಪಡಿಸಿದ್ದಾರೆ.
ತಮ್ಮ ಜತೆ ಸಂಪರ್ಕಕ್ಕೆ ಬಂದಿದ್ದವರು ದಯಮಾಡಿ ಪರೀಕ್ಷೆ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ಇತರ ಪರೀಕ್ಷೆ ನಡೆಸುವ ಸಲುವಾಗಿ ಆಸ್ಪತ್ರೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಕೊರೊನಾ ಪರೀಕ್ಷೆ ಕೂಡ ನ಼ಡೆಸಲಾಯಿತು. ವರದಿ ಪಾಸಿಟಿವ್ ಬಂದಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಪ್ರಣಬ್ ಮುಖರ್ಜಿ ಶೀಘ್ರ ಚೇತರಿಕೆಯಾಗಲಿ ಎಂದು ಗಣ್ಯರು ಹಾರೈಸಿದ್ದಾರೆ.