ಇತ್ತೀಚಿನ ಸುದ್ದಿ
ಮಹಾರಾಷ್ಟ್ರದಲ್ಲಿ ಒಂದೇ ದಿನ 14, 718 ಮಂದಿಗೆ ಕೊರೊನಾ ಸೋಂಕು
August 28, 2020, 2:20 AM

ಮುಂಬೈ(reporterkarnataka news): ಮಹಾರಾಷ್ಟ್ರದಲ್ಲಿ ಕೊರೊನಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 14, 718 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಗಾಬರಿ ಮೂಡಿಸಿದೆ.
ಒಂದೇ ದಿನದಲ್ಲಿ ಮಾರಕ ಕೊರೊನಾ 355 ಮಂದಿಯನ್ನು ಬಲಿಪಡೆದುಕೊಂಡಿದೆ. ರಾಜ್ಯದಲ್ಲಿ 7, 33, 568 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಇದೀಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾದಿಂದ ಮಹಾರಾಷ್ಟ್ರದಲ್ಲಿ ಇದುವರೆಗೆ 23, 444 ಮಂದಿ ಮೃತಪಟ್ಟಿದ್ದಾರೆ.