ಇತ್ತೀಚಿನ ಸುದ್ದಿ
ಮತ್ತೆ ಮಾರಕ ಕೊರೊನಾ ಅಬ್ಬರ: ಮದ್ರಾಸ್ ಐಐಟಿಯಲ್ಲಿ ಲಾಕ್ ಡೌನ್ ಘೋಷಣೆ
December 15, 2020, 9:06 AM

ಚೆನ್ನೈ(reporterkarnataka news): ಮದ್ರಾಸ್ ಐಐಟಿ ಕ್ಯಾಂಪಸ್ ನಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಲಾಕ್ ಡೌನ್ ಘೋಷಿಸಲಾಗಿದೆ.
ವಿದ್ಯಾರ್ಥಿಗಳು ಸೇರಿದಂತೆ 71 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಐಐಟಿಯ ಎಲ್ಲ ವಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ನಡೆಸಲು ಐಐಟಿ ಆಡಳಿತ ಮಂಡಳಿ ಆದೇಶ ನೀಡಿದೆ.